ಬೆಳಗಾವಿ:- ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಗುದ್ದಿ ಹೊಲದಲ್ಲಿ ಕಾರು ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದ ಗಣೇಶ ನಗರ ಹತ್ತಿರ ನಡೆದಿದೆ.
ಬೆಂಗಳೂರಿನಲ್ಲಿ ನಾಳೆ ಪವರ್ ಕಟ್: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡ್ಕೊಳ್ಳಿ
ಚಿಕ್ಕೋಡಿ-ಬೆಳಗಾವಿ ಮುಖ್ಯ ರಸ್ತೆ ಮೇಲೆ ಸಿದ್ದು ಎಂಬವರು ಅಥಣಿಯಿಂದ ಸಂಕೇಶ್ವರ ನಗರಕ್ಕೆ ಹೊಗುವಾಗ ಘಟನೆ ನಡೆದಿದೆ.
ಮದುವೆಗಾಗಿ ಕಾರ್ ಮೂಲಕ ಹೋಗುತ್ತಿದ್ದ ವೇಳೆ ಚಿಕ್ಕೋಡಿ ಹೊರವಲಯದಲ್ಲಿರುವ ಗಣೇಶ್ ನಗರ ಗೇಟ ಹತ್ತಿರ ಫರ್ನಿಚರ ಅಂಗಡಿಯ ಮುಂದೆ ತೆರಳುವ ಸಿದ್ದು ಆವರಿಗೆ ತಲೆ ಸುತ್ತು ಬಂದಿದ್ದು ಇದರಿಂದ ವಾಹನ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬೇರೆ ಕಾರಿಗೆ ಡಿಕ್ಕಿ ಹೊಡೆದು, ಮೆಣಸಿನಕಾಯಿ ತೊಟಕ್ಕೆ ಕಾರು ಹೋಗಿದೆ.
ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದು ಕಾರಿನಲ್ಲಿ ಒಟ್ಟು 3 ಜನ ಪ್ರಯಾಣಿಸುತ್ತಿದ್ದರು
ಪಕ್ಕದಲ್ಲಿ ಟ್ರಾನ್ಸಪರ್ಮರ್ ಇತ್ತು ಆದರೆ ಅದೃಷ್ಟವಶ ಸಮೀಪದಿಂದ ಕಾರು ಹೊಲದಲ್ಲಿ ಹೋಗಿ ನಿಂತಿದೆ.
ಇಲ್ಲವಾದರೆ ದೊಡ್ಡ ಅನಾಹುತ ಆಗುತ್ತಿತ್ತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದರು. ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.