ಚಿತ್ರದುರ್ಗ: ಹೊಳಲ್ಕೆರೆ ರಾಷ್ಟ್ರೀಯ ಹೆದ್ದಾರಿ 13 ರ ದುಮ್ಮಿ ಗ್ರಾಮದ ಬಳಿ ಇಕೋ ಕಾರು ಪಲ್ಟಿ ಹೊಡೆದ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಸಣ್ಣಪುಟ್ಟ ಪೆಟ್ಟು ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇವರೆಲ್ಲರು ಶಿವಮೊಗ್ಗದಿಂದ ಹಿರಿಯೂರಿಗೆ ಹೊರಟಿದ್ದು, ಕಾರು ದುಮ್ಮಿ ಗ್ರಾಮದ ಹಳ್ಳದ ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಕ್ಕದ ಹಳ್ಳಕ್ಕೆ ಪಲ್ಟಿ ಹೊಡೆದು ಬಿದ್ದಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.