ಉಡುಪಿ: ತಡರಾತ್ರಿ ಎರಡು ಗಂಟೆ ಸುಮಾರಿಗೆ ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿ ಅಪಘಾತ ಸಂಭವಿಸಿದೆ. ಮಣಿಪಾಲ ಕಡೆಯಿಂದ ಬರುತ್ತಿದ್ದ ಆಂಬುಲೆನ್ಸ್, ಡಿವೈಡರ್ ನ ಗ್ಯಾಪ್ ನಲ್ಲಿ ಬಲಕ್ಕೆ ತಿರುಗಿ ಮೆಡಿಕಲ್ ಶಾಪ್ ಒಂದಕ್ಕೆ ನುಗ್ಗಿದೆ. ಅಂಬುಲೆಸ್ನ ಬ್ರೇಕ್ ಫೇಲ್ ಆಗಿರುವುದರಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.
Dry Black Grapes Benefit: ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು!
ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದಾನೆ. ವಾಣಿಜ್ಯ ಸಂಕೀರ್ಣದಲ್ಲಿರುವ ಹೋಟೆಲ್ ಹಾಗೂ ಜನೌಷಧಿ ಮೆಡಿಕಲ್ ಗೆ ಅಪಾರ ಹಾನಿಯಾಗಿದೆ. ತಡರಾತ್ರಿ ಯಾವುದೇ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವುದರಿಂದ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಏಕಾಏಕಿ ವಾಹನ ನುಗ್ಗಿ ಸಂಭವಿಸಿರುವ ಅಪಘಾತ ಸ್ಥಳ ಕಾಣಲು ಭೀಕರವಾಗಿದೆ.