ನವದೆಹಲಿ: ಡಾಕ್ಯುಮೆಂಟ್ ದಾಖಲೆಗಳನ್ನು ಕೇಳಿದ ನಂತರ ವೇಗವಾಗಿ ಬಂದ ವಾಹನವೊಂದು ಟ್ರಾಫಿಕ್ ಪೊಲೀಸರನ್ನು ಎಳೆದೊಯ್ದ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ತಿಳಿಸಿದೆ. ಬಲ್ಲಭಗಢ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ..?: ಟ್ರಾಫಿಕ್ ಪೊಲೀಸರು ವಾಹನವನ್ನು ನಿಲ್ಲಿಸಿ ದಾಖಲೆಗಳನ್ನು ನೀಡುವಂತೆ ಕೇಳುತ್ತಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಚಾಲಕ ಸಡನ್ ಆಗಿ ಆಕಿಲರೇಟರ್ ತುಳಿದಿದ್ದಾನೆ. ಪರಿಣಾಮ ಟ್ರಾಫಿಕ್ ಪೊಲೀಸ್ ಸಹಿತ ವಾಹನ ವೇಗವಾಗಿ ಮುಂದೆ ಚಲಿಸಿದ್ದು, ಅಧಿಕಾರಿಯನ್ನು ಕೆಲ ಮೀಟರ್ಗಳಷ್ಟು ದೂರ ಎಳೆದುಕೊಂಡು ಹೋಗಿದೆ.
https://x.com/PTI_News/status/1804436128319132152?ref_src=twsrc%5Etfw%7Ctwcamp%5Etweetembed%7Ctwterm%5E1804436128319132152%7Ctwgr%5E91f0484c11c058e93c65f8a7c36fe39c3f055223%7Ctwcon%5Es1_&ref_url=https%3A%2F%2Fpublictv.in%2Fon-camera-haryana-traffic-cop-dragged-by-drunk-driver-video-viral%2F
ಇದೇ ವೇಳೆ ಸ್ಥಳೀಯರು ಹಾಗೂ ಇತರ ಟ್ರಾಫಿಕ್ ಪೊಲೀಸರ ಸಹಾಯದಿಂದ ವಾಹವನನ್ನು ನಿಲ್ಲಿಸಿ, ಸಿಲುಕಿಕೊಂಡ ಪೊಲೀಸ್ ಅಧಿಕಾರಿಯನ್ನು ರಕ್ಷಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಘಟನೆ ಸಂಬಂಧ ಪೊಲೀಸರು ಚಾಲಕನನ್ನು ಗುರುತಿಸಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)