ಬೆಂಗಳೂರು:- ನಾಯಿ ಕೋಳಿ ತಿಂದಿತೆಂದು ನೆರೆಮನೆಯ ಯುವಕನೋರ್ವ ಶೆಡ್ ನಲ್ಲಿ ಶ್ವಾನಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ವಿಲ್ ಬರೆದು ರಿಜಿಸ್ಟರ್ ಮಾಡಿದರೆ ಸಾಲಲ್ಲ, ಸಾಕ್ಷಿ ಬೇಕು: ಸುಪ್ರೀಂ!
ಮನೋಜ್ ಕುಮಾರ್ ಎಂಬಾತನಿಂದ ಕೃತ್ಯ ನಡೆದಿದೆ. ಮನೆಯೊಂದರ ಶೆಡ್ನಲ್ಲಿ ಕಟ್ಟಿ ಹಾಕಿದ್ದ ನಾಯಿಯ ಮೇಲೆ ಮನೋಜ್ ಹಲ್ಲೆ ನಡೆಸಿದ್ದಾನೆ. ಗಂಭೀರ ಗಾಯಗೊಂಡು ನಿತ್ರಾಣವಾಗಿದ್ದ ನಾಯಿ 2-3 ದಿನಗಳಲ್ಲಿ ಸಾವನ್ನಪ್ಪಿದೆ. ಸಿಸಿಟಿವಿ ಪರಿಶೀಲನೆ ವೇಳೆ ಯುವಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ವಿಚಾರಿಸಿದಾಗ ನಾಯಿ ಕೋಳಿ ಹಿಡಿದ ವಿಚಾರ ಬಯಲಾಗಿದೆ.