ವೈದ್ಯಕೀಯ ಲೋಕದಲ್ಲಿ ದಿನೇ ದಿನೇ ಅಚ್ಚರಿಯ ವಿಚಾರಗಳು ಬಯಲಾಗುತ್ತಲೆ ಇರುತ್ತವೆ. ಇದೀಗ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತ ಸಾಧನೆಯನ್ನು ಸಿಲಿಕಾನ್ ಸಿಟಿ ಬೆಂಗಳೂರ ಪೊಲೀಸರು ನಡೆಸಿದ್ದಾರೆ. ಬೆಂಗಳೂರಿನ ಆಸ್ಟರ್ ಆರ್ವಿ ಆಸ್ಪತ್ರೆ ಸಿಬ್ಬಂದಿ ಹೊಸ ಆವಿಷ್ಕಾರದ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಹೌದು, ಆಸ್ಟರ್ ಆರ್ವಿ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯದಿಂದ ಬರೋಬ್ಬರಿ 4.005 ಕೆಜಿ ಫೈಬ್ರಾಯ್ಡ್ ಗೆಡ್ಡೆ ತೆಗೆದು ಹಾಕಿ ದಾಖಲೆ ಸೃಷ್ಟಿಸಿದ್ದಾರೆ. ಈ ರೀತಿಯ ದಾಖಲೆಯೊಂದು ಸೃಷ್ಟಿಯಾಗಿರುವುದು ದಕ್ಷಿಣ ಭಾರತದಲ್ಲೇ ಮೊದಲು.
ಆಸ್ಟರ್ ಆರ್ವಿ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ. ಸುನಿಲ್ ಈಶ್ವರ್ ಮತ್ತವರ ವೈದ್ಯಕೀಯ ತಂಡ 42 ವರ್ಷದ ಮಹಿಳೆ ಒಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದೆ.
42 ವರ್ಷದ ಮಹಿಳೆ ಒಬ್ಬರಿಗೆ ಯಾವುದೇ ಬಾಹ್ಯ ರೋಗಲಕ್ಷಣಗಳು ಇರಲಿಲ್ಲ. ಆದರೆ ಅವರ ದೇಹದೊಂದಿಗೆ ಗಡ್ಡೆ ಬೆಳೆಯುತ್ತಿತ್ತು. ಇದರಿಂದ ಗರ್ಭಾಶಯದ ವ್ಯವಸ್ಥೆಗೆ ತೊಂದರೆ ಆಗಿತ್ತು. ಇವರ ಆರೋಗ್ಯಕ್ಕೂ ಬಹಳ ಅಪಾಯ ಇತ್ತು. ವೈದ್ಯರು ಸ್ಕ್ಯಾನ್ ಮಾಡಿದಾಗ 12 ಸೆಂಟಿ ಮೀಟರ್ ಉದ್ಧದ ನಾರುಗಡ್ಡೆ ಕಾಣಿಸಿಕೊಂಡಿತ್ತು. ವೈದ್ರು ಸುಮಾರ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅದರ ಭಾಗದಲ್ಲಿ 3 ಸೆಂಟಿ ಮೀಟರ್ ಕತ್ತರಿಸಿ ಗಡ್ಡೆಯನ್ನು ಹೊರಗೆ ತೆಗೆದಿಸಿದ್ದಾರೆ.
ಇದೊಂದು ಚಾಲೆಂಜಿಂಗ್ ಕೇಸ್ ಆಗಿತ್ತು. ಅದರಲ್ಲೂ ಶಸ್ತ್ರಚಿಕಿತ್ಸೆ ಬಹಳ ಸವಾಲಿನಿಂದ ಕೂಡಿತ್ತು. ಗರ್ಭಾಶಯಕ್ಕೆ ರಕ್ತ ಪೂರೈಸುವ ಹೊಟ್ಟೆ ಭಾಗದಲ್ಲಿ ಸಾಮಾನ್ಯ ರಕ್ತನಾಳಗಳನ್ನು ಪತ್ತೆ ಹಚ್ಚಿದೆವು. ನಂತರ ತುಂಬಾ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ಮಾಡಿದೆವು. ಈ ರೀತಿಯ ನಾರುಗಡ್ಡೆಗಳು ಸಂತಾನೋತ್ಪತ್ತಿ ವಯಸ್ಸಿನ ಶೇ. 20-30 ಮಹಿಳೆಯರಲ್ಲಿ ಕಂಡು ಬರುತ್ತದೆ. ಇದೊಂದು ಅಪರೂಪದ ಪ್ರಕರಣ ಎಂದರು ಸುನಿಲ್ ಈಶ್ವರ್.
ಇನ್ನು, ನಾರುಗಡ್ಡೆ ತೆಗೆದು ಹಾಕಲು 8. ಸೆಂಟಿ ಮೀಟರ್ ಕತ್ತರಿಸಬೇಕು. ಆದರೆ, ಲ್ಯಾಪ್ರೋಸ್ಕೋಪಿಕ್ ವಿಧಾನದಲ್ಲಿ 3 ಸೆಂಟಿ ಮೀಟರ್ ಕತ್ತರಿಸಿದ್ರೆ ಸಾಕು. ಶಸ್ತ್ರಚಿಕಿತ್ಸೆ ಕೇವಲ 2 ದಿನದಲ್ಲಿ ಮಹಿಳೆ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.