ಚಾಮರಾಜನಗರ: ಸಾಕಾಣಿಕೆ ಮಾಡಿದ್ದ ಮೀನುಗಳಿಗೆ ದುಷ್ಕರ್ಮಿಗಳು ವಿಷ ಹಾಕಿದ ಘಟನೆ ಚಾಮರಾಜನಗರ ಪಟ್ಟಣದ ರಾಮಸಮುದ್ರದಲ್ಲಿ ನಡೆದಿದೆ. ರಾಮಸಮುದ್ರ ಬಡಾವಣೆಯ ರೈತ ಮಹೇಶ್ ಬಾಬು ಎಂಬುವವರ ಜಮೀನಿನಲ್ಲಿ ಸಾಕಾಣಿಕೆ ಮಾಡಿದ್ದ ಸಾವಿರಾರು ಮೀನುಗಳ ಸಾವನ್ನಪ್ಪಿವೆ.
ರಾಮಸಮುದ್ರ ಬಸವನಪುರ ರಸ್ತೆಯಲ್ಲಿರುವ ಮಹದೇಶ್ವರ ದೇವಾಲಯದ ಸಮೀಪದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ರೈತ ಮಹೇಶ್ ಬಾಬು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಜಮೀನಿನಲ್ಲಿ ಮೀನು ಸಾಕಾಣಿಕೆ ಮಾಡಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳು ಮೀನಿನ ಹೊಂಡಕ್ಕೆ ವಿಷ ಹಾಕಿದ್ದಾರೆ. ಹಾಗಾಗಿ ಮೀನು ಸಾಕಾಣಿಕೆ ಘಟಕದಲ್ಲಿದ್ದ ಸಾವಿರಾರು ಮೀನುಗಳು ಏಕಕಾಲದಲ್ಲಿ ಸಾವನ್ನಪ್ಪಿವೆ.