ಗದಗ:- ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಮೃತಪಟ್ಟಿರುವ ಘಟನೆ ಗದಗನ ಚಿಂತಾಮಣಿ ಹಾರ್ಟ್ ಕೇರ್ ಸೆಂಟರ್ ನಲ್ಲಿ ಜರುಗಿದೆ.
Yeddyurappa: ಪ್ರಾಸಿಕ್ಯೂಶನ್ ಅನುಮತಿ ಹಿಂದೆ ಸರ್ಕಾರದ ದುರುದ್ದೇಶ ಇದೆ: ಬಿಎಸ್ ಯಡಿಯೂರಪ್ಪ
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ 1o ವರ್ಷದ ಮರ್ದಾನಸಾಬ್ ಹಂದ್ರಾಳ ಮೃತ ಯುವಕ. ಕಫ, ಉಸಿರಾಟ ಸಮಸ್ಯೆಯಿಂದ ಮಧ್ಯಾಹ್ನ ಆಸ್ಪತ್ರೆಗೆ ಯುವಕ ದಾಖಲಾಗಿದ್ದ. ಇದೆ ವೇಳೆ ಚೇತರಿಸಿಕೊಳ್ತಿದ್ದಾನೆ ಅಂತಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಡಾ.ಮಧುಸೂದನ್ ಚಿಂತಾಮಣಿ ಎಂಬ ವೈದ್ಯರಿಂದ ಚಿಕಿತ್ಸೆ ನೀಡಲಾಗಿತ್ತು. ಬಿಪಿ, ಸುಗರ್, ಇಸಿಜಿ ಎಲ್ಲವೂ ನಾರ್ಮಲ್ ಎಂದು ವೈದ್ಯ ಮಧುಸೂದನ್ ಹೇಳಿದ್ದರು. ಸಂಜೆ ಆಸ್ಪತ್ರೆ ಸಿಬ್ಬಂದಿಗಳು ಔಷಧಿ ನೀಡಿದ್ದರು.
ಸಿಬ್ಬಂದಿ ಬಂದು ಓವರ್ ಡೋಸ್ ಇಂಜೆಕ್ಷನ್ ಹಾಗೂ ಆಕ್ಸಿಜನ್ ಹೆಚ್ಚು ನೀಡಿರುವ ಆರೋಪ ಕೇಳಿ ಬಂದಿದೆ.
ಸಲಾಯಿನ್ ನಲ್ಲಿ ಇಂಜೆಕ್ಷನ್ ಮಾಡಿದ ಕೂಡಲೇ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು, ಸಿಬ್ಬಂದಿಗಳಿಗೆ ಹೇಳಿದ್ರೆ ನಿರ್ಲಕ್ಷ್ಯ ತೋರಿದ ಆರೋಪ ಕೇಳಿ ಬಂದಿದೆ.
ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಮೃತಪಟ್ಟೊರುವ ಆರೋಪ ಕೇಳಿ ಬಂದಿದೆ. ಚಿಂತಾಮಣಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು, ವೈದ್ಯರ ವಿರುಧ್ಧ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ.
ಸಾವಿಗೆ ಕಾರಣರಾದ ವೈದ್ಯ ಹಾಗೂ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಆಗುವ ವರೆಗೆ ಶವ ತೆಗೆದುಕೊಳ್ಳುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.