ಕೇರಳ: ಅದು 2022ರಲ್ಲಿ ಶಾರೂನ್ ಎಂಬ ಯುವಕನ ಸಾವು ರಾಷ್ಟ್ರದ ಗಮನ ಸೆಳೆದಿತ್ತು, ಈತನನ್ನು ಈತನ ಪ್ರೇಯಿಸಿಯೇ ವಿಷ ನೀಡಿ ಸಾಯಿಸಿದ್ದಳು, ಈ ಪ್ರಕಣರಣ ಹೊರ ಹೊರ ಬಂದಾಗ ಅಂದಗಾತಿಯ ಮನಸ್ಸು ಇಷ್ಟೊಂದು ಕ್ರೂರಿಯಾಗಿತ್ತೇ? ಅವಳಿಗೆ ಬೇಡವೆಂದರೆ ಅವನನ್ನು ಬಿಡಬಹುದಿತ್ತು, ಅನ್ಯಾಯವಾಗಿ ಆ ಹುಡುಗನನ್ನು ಕೊಂದಳು ಎಂದು ಜನರು ಆಕೆಗೆ ಹಿಡಿ ಶಾಪ ಹಾಕಿದರು.
ಇನ್ನೂ ಕೇರಳದ ವಿಷ ಕನ್ಯೆ ಗ್ರೀಷ್ಮಾಳಿಗೆ ಕೋರ್ಟ್ ಮರಣದಂಡನೆ ನೀಡಿದೆ,ಈ ತೀರ್ಪು ಸಾಕಷ್ಟು ಜನರಿಗೆ ಸಂತಸ ತಂದಿದೆ, ಕೊನೆಗೂ ಸತ್ತ ಹುಡುಗನ ಆತ್ಮಕ್ಕೆ ಶಾಂತಿ ಸಿಗುವಂತಾಯ್ತು ಎಂದು ಮಾತನಾಡುತ್ತಿದ್ದಾರೆ. ಗ್ರೀಷ್ಮಾ ಎಂಬ ಕೊಲೆಗಾತಿಗೆ ಮರಣ ದಂಡನೆ ಶಿಕ್ಷೆ ನೀಡುವ ಮೂಲಕ ಶಾರೂನ್ ಸಾವಿಗೆ ನ್ಯಾಯ ಸಿಕ್ಕಿದೆ. ಅಪೂರ್ವಗಳಲ್ಲಿ ಅಪೂರ್ವವಾಗಿರುವ ಈ ಪ್ರಕರಣ ಏನು? ಎಷ್ಟೋ ಕೊಲೆಗಾರರು ಜೈಲ್ನಲ್ಲಿದ್ದಾರೆ ಅವರಿಗೆಲ್ಲಾ ಜೈಲು ಶಿಕ್ಷೆಯಿದೆ,ಆದರೆ ಮರಣ ದಂಡನೆ ಶಿಕ್ಷೆಯಾಗಿಲ್ಲ, ಆದರೆ ಈಕೆಗೆ ಕೇರಳ ಹೈಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ.
ಶಾರೂನ್ ಮತ್ತು ಗ್ರೀಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರು ಜೊತೆಯಾಗಿ ಸುತ್ತಾಡಿದ್ದರು, ಅವರ ಖಾಸಗಿ ಫೋಟೋಗಳು ಶಾರೂನ್ ಫೋನ್ನಲ್ಲಿತ್ತು, ಹೀಗಿರುವಾಗ ಆಕೆಗೆ ಆರ್ಮಿಯಲ್ಲಿರುವ ವ್ಯಕ್ತಿಯ ಮದುವೆ ಪ್ರಪೋಸಲ್ ಬರುತ್ತದೆ. ಈಕೆ ಶಾರೂನ್ ಜೊತೆ ಬ್ರೇಕಪ್ ಮಾಡಿ ಆತನನ್ನು ಮದುವೆಯಾಗುವುದರ ಬಗ್ಗೆ ಆಲೋಚಿಸುತ್ತಾಳೆ.
ಈಕೆಯ ಮನೆಯವರು ಯಾವುದೋ ಜ್ಯೋತಿಷಿಯನ್ನು ಭೇಟಿಯಾದಾಗ ಈಕೆ ಮದುವೆಯಾದರೆ ಮೊದಲ ಗಂಡ ಸಾಯುತ್ತಾನೆ ಎಂದು ಹೇಳಿದ್ದರಂತೆ ಇದನ್ನು ನಂಬಿದ ಗ್ರೀಷ್ಮಾ ಒಂದು ಪ್ಲ್ಯಾನ್ ಮಾಡುತ್ತಾಳೆ, ಮತ್ತೆ ಶಾರೂನ್ನಿಗೆ ಕರೆ ಮಾಡಿ ಪ್ರೀತಿ ಪ್ರೇಮ ಎಂದು ನಟಿಸುತ್ತಾಳೆ, ಇಬ್ಬರು ಮದುವೆಯಾಗೋಣ ಅಂತಾಳೆ, ಅವಳನ್ನು ಯಾರಿಗೂ ಗೊತ್ತಾಗದಂತೆ ಶಾರೂನ್ ಮದುವೆಯಾಗುತ್ತಾನೆ, ನಂತರ ಆಕೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅವನನ್ನು ಕರೆಸಿ ಆತನಿಗೆ ಸ್ಲೋ ಪಾಯಿಸನ್ ನೀಡುತ್ತಾಳೆ.
ಅವಳು ಅವನಿಗೆ ಲೇಹ್ಯ ತೋರಿಸಿ ಇದು ತುಂಬಾ ಕಹಿಯಿದೆ ನಿನಗೆ ಇದನ್ನು ತಿನ್ನಲು ಸಾಧ್ಯನೇ ಇಲ್ಲ, ನನ್ನ ಮೇಲೆ ಪ್ರೀತಿ ಇದ್ದರೆ ತಿನ್ನು ನೋಡುವ ಅಂತಾಳೆ, ಆತ ಆ ಲೇಹ್ಯ ಸೇವಿಸುತ್ತಾನೆ, ಸ್ಲೋ ಪಾಯಿಸನ್ ಆತನ ಹೊಟ್ಟೆ ಸೇರಿ ನಿಧಾನಕ್ಕೆ ಆತನ ಆರೋಗ್ಯ ಹದಗೆಡುತ್ತೆ, ಮೊದಲಿಗೆ ವಾಂತಿ ಶುರುವಾಗಿ ನಂತರ ಬಹು ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುತ್ತಾನೆ.
ಗ್ರೀಷ್ಮಾ ವರ್ಷದವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಳು , ನಂತರ ಆಕೆ ಬೇಲ್ ಪಡೆದು ಹೊರ ಬಂದಿದ್ದಳು, ಆವಾಗಲೇ ಈ ಕ್ರೂರಿ ಹೆಣ್ಣಿಗೆ ಬೇಲ್ ಸಿಕ್ಕಬಾರದಿತ್ತು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಶಾರೂನ್ ಪೋಷಕರು ಏನೇ ಆಗಲಿ ನಮ್ಮ ಮಗನಿಗೆ ಖಂಡಿತ ನಾವು ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೋರಾಡಿದರು, ಈಗ ಈಕೆಗೆ ಮರಣ ದಂಡನೆ ಶಿಕ್ಷೆಯಾದ ಬಳಿಕ ಶಾರೂನ್ ಜಡ್ಜ್ ನಮಗೆ ದೇವರ ಸಮಾನರಾಗಿದ್ದಾರೆ, ನಾನು ಈಗ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ, ಬಂದ ತೀರ್ಪು ಮನಸ್ಸಿಗೆ ಖುಷಿ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.