ಬೆಂಗಳೂರು ಗ್ರಾಮಾಂತರ: ಅನುಮಾನಸ್ಪದ ರೀತಿಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥ ಕಲ್ಯಾಣ ಮಂಟಪ ಬಳಿ ಜರುಗಿದೆ.
killed her son: ಗೋವಾದಲ್ಲಿ ಮಗನನ್ನು ಕೊಂದ ಸುಚನಾ ಸೇಠ್ ಯಾರು? – ಹಿನ್ನೆಲೆ ಏನು?
ಮೃತ ವ್ಯಕ್ತಿ 30ರ ವಯಸ್ಸಿನ ಆಸುಪಾಸಿನ ಯುವಕ ಎನ್ನಲಾಗಿದೆ. ಗುರುತು ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈ ಮೇಲೆಲ್ಲಾ ಸುಟ್ಟ ಗಾಯ ಗುರುತು ಸಿಗದ ರೀತಿಯಲ್ಲಿ ಶವ ಪತ್ತೆ ಆಗಿದ್ದು, ಘಟನಾಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.