ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಮಗಳು ನಿಶಾ ಯೋಗೇಶ್ವರ್ ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದ್ದಾರೆ. ತಂದೆ ಹೆಸರು ತೆಗೆದು ನೀವು ಯಾವ ಕೆಲಸ ಬೇಕಾದ್ರೂ ಮಾಡಿ. ಯೋಗೇಶ್ವರ್ ಇಲ್ಲವಾದ್ರೆ ನಿಮ್ಮ ಅಸ್ತಿತ್ವ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಬಂದಿದೆ. ಇದಕ್ಕೆ ನಿಶಾ ಯೋಗೇಶ್ವರ್ ಉತ್ತರ ನೀಡಿದ್ದಾರೆ.
‘ ನನಗೆ 10 ವರ್ಷ ಇದ್ದಾಗಲೇ ನಮ್ಮ ತಂದೆ ನಮ್ಮಿಂದ ದೂರ ಹೋದರು. ತಂದೆ ದೂರವಾದ 24 ವರ್ಷದ ಬಳಿಕವೂ ಅವರನ್ನು ನೋಡುತ್ತಿದ್ದೇನೆ. ಎಲೆಕ್ಷನ್ ಟೈಮ್ ನಲ್ಲಿ ಕರೆಯುತ್ತಿದ್ದರು. ಮನೆ ಮನೆಗೆ ತೆರಳಿ ತಂದೆ ಯೋಗೇಶ್ವರ್ ಗೆಲುವಿಗೆ ಪ್ರಾರ್ಥನೆ ಮಾಡುತ್ತಿದ್ದೆ. ಆ ಸಮಯದಲ್ಲಿ ಅಪ್ಪನಿಗೆ ನಾನು ಆದರ್ಶ ಮಗಳಾಗಿದೆ.
Black radish: ಕಪ್ಪು ಮೂಲಂಗಿ ಬೆಳೆಯುವುದು ಹೇಗೆ..? ಇದರ ಉಪಯೋಗವೇನು..?
ದೂರವಾದ 24 ವರ್ಷದ ಬಳಿಕ ನನ್ನ ಬಗ್ಗೆ ಯೋಚನೆ ಮಾಡಿದ್ದಕ್ಕೆ ನಾನು ಅವ್ರಿಗೆ ಆದರ್ಶ ಮಗಳಲ್ಲ. ನಾನು ನನ್ನ ತಂದೆ ಹೆಸರು ತೆಗೆದು ಹಾಕಬೇಕು. ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿರುವವರು ಯಾರು ಎಂದು ಗೊತ್ತು. ಕಮೆಂಟ್ ಮಾಡಿರೋರೆಲ್ಲ ತಂದೆ ಹೆಸರು ಹೇಗೆ ತೆಗೆಯೋದು ಅಂತ ಹೇಳಿ’ ಎಂದು ಸವಾಲು ಹಾಕಿದ್ದಾರೆ.
ಆಧಾರ್ ಕಾರ್ಡ್, ಪಾಸ್ ಪೋರ್ಟ್, ಬರ್ತ್ ಸರ್ಟಿಫಿಕೇಟ್ ನಲ್ಲಿ ಹೆಸರು ಬದಲಾವಣೆ ಮಾಡಬೇಕು. ಹೆಸರು ತೆಗೆದ್ರೆ ಸಿ ಪಿ ಯೋಗೇಶ್ವರ್ ನನ್ನ ತಂದೆ ಅಲ್ಲ ಅನ್ನೋಕೆ ಆಗತ್ತಾ? ಭಗವಂತನ ಇಚ್ಚೆಯಿಂದ ಯೋಗೇಶ್ವರ್ ಮಗಳಾಗಿ ಹುಟ್ಟಿದ್ದೇನೆ. 24 ವರ್ಷಗಳ ಹಿಂದೆ ಜೀವನದಿಂದಲೇ ತೆಗೆದ್ರಿ. ಈಗ ನನ್ನ ಹೆಸರ ಜೊತೆ ಅವ್ರ ಹೆಸರು ಇರೋದನ್ನ ತಡೆದುಕೊಳ್ಳೋಕೆ ಆಗುತ್ತಿಲ್ಲ. ಜನರ ಒತ್ತಾಯಕ್ಕೆ ಮಣಿದು ತಾನು ಅಪ್ಪನೊಂದಿಗೆ ರಾಜಿ ಮಾಡಿಕೊಡು ಅವರೊಂದಿಗಿರಲು ಹೋದರೆ, ರಪರಪಾಂತ ಹೊಡೆಯುತ್ತಾರೆ,
ಆಚೆ ಹೋಗಿ ಭಿಕ್ಷೆಯಾದರರೂ ಬೇಡಿ ಬದುಕಿಕೋ ಮನೆಗೆ ಮಾತ್ರ ಬರಬೇಡ ಅನ್ನುತ್ತಾರೆ ಎಂದು ನಿಶಾ ಹೇಳುತ್ತಾರೆ. ಿನ್ನೂ ಪ್ರಪಂಚಕ್ಕೆ ನೀನು ಎಂಥ ಮಗಳು, ನಿಮ್ಮ ತಂದೆ ತಾಯಿ ಅವ್ರನ್ನ ಅರ್ಥ ಮಾಡಿಕೊಳ್ಳೋಕೆ ಆಗುತ್ತಿಲ್ಲ ಅಂತೀರ? ಆದ್ರೆ ನಮ್ಮ ತಂದೆ ತಾಯಿ ಮಾಡುತ್ತಿರೋದು ಸರಿನಾ? ಕಳೆದ 20 ವರ್ಷದಿಂದ ಚಿಕ್ಕಮ್ಮನ ಮಗಳು ನಮ್ಮ ತಂದೆ ಜೊತೆ ಇದ್ದಾಳೆ. ಆದ್ರೆ ಸ್ವಂತ ಮಗಳಾದ ನಾನು ನಮ್ಮ ತಂದೆ ಜೊತೆ ಇರೋಕೆ ಆಗಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.