ರಾಯಬಾಗ:- ಕಳೆದ ಎರಡು ತಿಂಗಳಿಂದ ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡುತ್ತೇನೆ, ಎಂದು ಹಾರಿಕೆ ಉತ್ತರ ನೀಡುತ್ತ, ಗ್ರಾಮಸ್ಥರ ಹಾಗೂ ದಲಿತರ ಮಾತನ್ನು ಕಡೆಗಣಿಸುತ್ತಿರುವ ತಹಶೀಲ್ದಾರ್ ಸುರೇಶ ಮುಂಜೆ,
ರಾಯಬಾಗ ತಾಲೂಕು ಪೂರ್ವ ಭಾಗದ ಕಡೆ ಗ್ರಾಮವೇ ಪಾಲಬಾವಿ. ಕಳೆದ ನಾಲ್ಕು ದಶಕಗಳಿಂದ ಗ್ರಾಮದ ವಾರ್ಡ್ ನಂಬರ್ 3ರಲ್ಲಿ ಭೂಮಿಯ ಸರ್ವೆ ಮಾಡುವ ಕೆಲಸವು ನೆನೆಗುದ್ದಿಗೆ ಬಿದ್ದಿರುವ ಕಾರಣ ತಹಶೀಲ್ದಾರ್ ಸಮ್ಮುಖದಲ್ಲಿ ಸರ್ವೇ ಕಾರ್ಯ ಮಾಡಿಸಿ ಸಾರ್ವಜನಿಕರು ಹಾಗೂ ದಲಿತ ಸಮುದಾಯವು ಹಾಗೂ ವಾರ್ಡ್ ನಿವಾಸಿಗಳು ತಹಶೀಲ್ದಾರರಲ್ಲಿ ಮನವಿ ಮಾಡುತ್ತಾ ಬಂದಿರುತ್ತಾರೆ.
ರಾಯಬಾಗ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಅವರು ಪಾಲಬಾವಿ ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಗ್ರಾಮದ ವಾರ್ಡ್ ನಂಬರ್ 3ರ ಸಾರ್ವಜನಿಕರ ಹಾಗೂ ದಲಿತ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪಾಲಬಾವಿ ಗ್ರಾಮದ ಸರ್ವೆ ನಂಬರ್ 227/2ರಲ್ಲಿ 01 ಎಕರೆ 09 ಗುಂಟೆ ಜಮೀನು ಬಿಡಿಒ ರಾಯಬಾಗ ಅವರ ಹೆಸರಿನಲ್ಲಿದ್ದು ಹಾಗೂ 228/ 1+2ಎ 01 ಎಕರೆ 38 ಗಂಟೆಯ ಮಂಡಲ ಪಂಚಾಯತ ಹಂದಿಗುಂದ ಹೆಸರಿನಲ್ಲಿದ್ದು ಅದೂ ಕೂಡ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅವರ ಹೆಸರು ಮೇಲೆಯೇ ಇದೆ. ಕಳೆದ 40 ವರ್ಷಗಳ ಹಿಂದೆ ಗ್ರಾಮದ ಹಿರಿಯರು ದಾನದ ರೂಪದಲ್ಲಿ ಕೊಟ್ಟಿರುವ ಈ ಎರಡು ಕಡೆಯ ಜಮೀನವನ್ನು ಸರ್ವೆ ನಂಬರನಲ್ಲಿಯ ಒಟ್ಟು 03 ಎಕರೆ 07ಗುಂಟೆ ಜಮೀನವು ತಾಲೂಕು ಪಂಚಾಯಿತಿ ಇಲಾಖೆಯ ಹೆಸರಿನಲ್ಲಿ ಇದೇ. ಗ್ರಾಮ ಪಂಚಾಯಿತ್ ಅಧಿಕಾರಿಗಳು ಆದೇಶದಂತೆ, ಚುನಾಯಿತ ಜನಪ್ರತಿನಿಧಿಗಳ ಸಲಹೆಯಂತೆ ಸಾರ್ವಜನಿಕರು ಈ ಎರಡು ಸರ್ವೇದ ಜಮೀನಿನಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ.
ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುವ ಸಾರ್ವಜನಿಕರಿಗೆ ಹಕ್ಕುಪತ್ರ ನೀಡಿ ಅವರಿಗೆ ನಿಜವಾದ ಬದುಕನ್ನು ಕಲ್ಪಿಸಿ ಕೊಡಬೇಕಾದದ್ದು ಅಧಿಕಾರಿಗಳ ಕೆಲಸವಾಗಿದ್ದು, ಅದಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ, ಸರ್ವೆ ಮಾಡಿಸಿ ನಿಜವಾದ ಫಲಾನುಭವಿಗಳಿಗೆ ಹಕ್ಕಪತ್ರ ಕೊಡುವಂತೆ ಸಾರ್ವಜನಿಕರು ಹಲವಾರು ವರ್ಷಗಳ ಬೇಡಿಕೆಯಾಗಿದ್ದು ಆದರೆ , ತಹಶೀಲ್ದಾರ್ ಸುರೇಶ್ ಮುಂಜೆ ಅವರು ಗ್ರಾಮಕ್ಕೆ ಭೇಟಿ ನೀಡದೇ ಇರುವುದು ಸಾರ್ವಜನಿಕರ ಹಾಗೂ ದಲಿತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.