ಕಲಬುರಗಿ : ಕಲಬುರಗಿಯ ಬಹುತೇಕ ಸಿಮೇಂಟ್ ಕಾರ್ಖಾನೆಗಳಲ್ಲಿನ ಕಾರ್ಮಿಕರ ಜೊತೆ ಅಲ್ಲಿನ ಆಡಳಿತ ಮಂಡಳಿಯವರು ಹಿಂದಿನಿಂದ ಅಮಾನವೀಯವಾಗಿ ನಡೆದುಕೊಂಡು ಬಂದಿದ್ದಾರೆ. ಇದೀಗ ಮೃತ ಕಾರ್ಮಿಕನ ಜೊತೆ ಸಹ ಇಂಥದ್ದೇ ಅಮಾವನೀಯ ವರ್ತನೆ ತೋರಿದ್ದು, ಸಮಾಜ ತೆಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ.
ಕಳೆದ ಎರಡು ದಿನದ ಹಿಂದೆ ಬಿಹಾರ್ ಮೂಲದ ಚಂದನಸಿಂಗ್ ಲೋ ಬಿಪಿಯಿಂದ ಸಾವನಪ್ಪಿದ್ದು, ಆತನ ಸಾವಿನ ಬಳಿಕ ಅಲ್ಲಿನ ಸಿಬ್ಬಂದಿ ಚಂದನ್ ಸಿಂಗ್ ಮೃತದೇಹವನ್ನು ಸತ್ತ ನಾಯಿಯಂತೆ ಕಾರ್ಖಾನೆಯತ್ತ ಎಳೆದುಕೊಂಡು ಹೋಗಿದ್ದಾರೆ. ಮೃತದೇಹದ ಜೊತೆ ಸಿಬ್ಬಂದಿ ನಡೆದುಕೊಂಡ ರೀತಿ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಮೃತ ಚಂದನಸಿಂಗ್ ಮೃತದೇಹವನ್ನು ಎಳೆದುಕೊಂಡು ಹೋದ ಆರು ಜನ ಕಾರ್ಮಿಕರಾದ ಉತ್ತರ ಭಾರತದ ಕಾರ್ಮಿಕರಾದ ಹೈದರ್ ಅಲಿ, ಅಜಯ್,ರವಿಶಂಕರ್, ಹರಿಂದರ್,ರಮೇಶಚಂದ್ರ ಹಾಗು ಅಖಿಲೇಶ್ ವಿರುದ್ಧ ಸೇಡಂ ಪೊಲೀಸರು ಸ್ವಯಂಪ್ರೇರಿರತರಾಗಿ ಬಿಎನ್ ಎನ್ ಎಸ್ 129(e),229(g) ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.