ಗದಗ : ಅತ್ಯಾಚಾರ ಮಾಡಿದ ಆರೋಪಿಗೆ ೧೦ ವರ್ಷ ಶಿಕ್ಷೆ ವಿಧಿಸಿ ಗದಗನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗಜೇಂದ್ರಗಡ ಶಹರದ ಲಂಬಾಣಿ ತಾಂಡಾದಲ್ಲಿ ಅತ್ಯಾಚಾರ ಪ್ರಕರಣ ನಡೆದಿತ್ತು.
2017ರ ಮೇ ತಿಂಗಳಿನಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದಿದ್ದ ವ್ಯಕ್ತಿ ಯುವತಿ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಲ್ಲದೇ 3 ವರ್ಷಗಳಿಂದ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಒತ್ತಾಯಪೂರ್ವಕವಾಗಿ ನಿರಂತರ ಅತ್ಯಾಚಾರ ಮಾಡಿದ್ದು, ಮದುವೆ ಮಾಡಿಕೊಳ್ಳದೇ ಮೋಸ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಆತನ ವಿರುದ್ಧ ಆರೋಪ ರುಜುವಾತು ಹಿನ್ನೆಲೆ ಆರೋಪಿ ಗುರುರಾಜ ಚವ್ಹಾಣ್ಗೆ ಶಿಕ್ಷೆ ಪ್ರಕಟಿಸಿದ್ದು, 10 ವರ್ಷ ಶಿಕ್ಷೆ ಹಾಗೂ 13 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.