ಬೆಂಗಳೂರು: ಇತ್ತಿಚೇಗೆ ನಗರದಲ್ಲಿ ಪೊಲೀಸ್ರ ಮೇಲೆ ಭಯ ಇಲ್ಲ. ಅದಕ್ಕೆ ಪುಡಿ ರೌಡಿಗಳು ರೋಡ್ ರೋಡ್ ಅಲ್ಲಿ ಲಾಂಗು ಮಚ್ಚು ಹಿಡಿದು ಓಡಾಡ್ತಿದ್ದಾರೆ. ಹೀಗಂತಾ ದಿನಾ ಸುದ್ದಿ ಬರ್ತಾನೆ ಇರುತ್ತೆ. ಅದಕ್ಕೆ ಇವತ್ತು ಮತ್ತೊಂದು ಸ್ಟೋರಿ ಸೇರ್ಪಡೆಯಾಗಿದೆ.
ಅಂದ ಹಾಗೆ ಇದು ನಡೆದಿರೋದು ಬ್ಯಾಡರಹಳ್ಳಿ ಪೊಲೀಸ್ ಠಾಣವ್ಯಾಪ್ತಿಯ ಬಿಳೇಕಳ್ಳಿ ಬಳಿ. ಆ ಎರಡು ಗುಂಪಿನ ಹುಡುಗರ ಮಧ್ಯೆ ಅದಾಗ್ಲೆ ಕಿರಿಕ್ ನಡೆದಿತ್ತು. ಬಿಳೇಕಳ್ಳಿಯ ಜಯಂತ ರತ್ನಾನಗರದ ನಂದೀಶ ಎಂಬುವವನ ಮೇಲೆ ಲಾಂಗ್ ಬೀಸಿ ಹಲ್ಲೆ ನಡೆಸಿದ್ದ. ಆದ್ರೆ ಈ ನಂದೀಶ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡೋದು ಬಿಟ್ಟು ತನ್ನ ಏರಿಯಾದ ವಿನಿ ಮತ್ತು ಚಿಕ್ಕು ಅನ್ನೋನಿಗೆ ಹೇಳಿದ್ದಾನೆ.
ಕಳೆದ 9 ನೇ ತಾರೀಖು ಮೂವರು ಇದೇ ಬಿಳೇಕಳ್ಳಿ ಉಲ್ಲಾಲು ರಸ್ತೆಯ ಅಪ್ಪು ಬೇಕರಿ ಬಳಿ ಮಾತುಕತೆಗೆ ಅಂತ ಹೋಗಿದ್ದಾರೆ. ಬೇಕರಿ ಬಳಿ ಧಮ್ ಹೊಡಿತಾ ಜಯಂತ್ ಮತ್ತು ಆತನ ಸ್ನೇಹಿತರು ನಿಂತಿದ್ದಾಗ, ವಿನಿ, ಚಿಕ್ಕು, ನಂದೀಶ್ ಹೋಗಿ ಮಾತು ಕತೆಗೆ ಮುಂದಾಗಿದ್ದಾರೆ. ಈ ವೇಳೆ ಜಯಂತ ಏಕಾಏಕಿ ಮತ್ತೆ ಅದೇ ಲಾಂಗ್ ತೆಗೆದು ವಿನಿ,ಚಿಕ್ಕು, ನಂದೀಶನ ಮೇಲೆ ಹಲ್ಲೆಗೆ ಮುಂದಾಗಿದ್ನಂತೆ. ಈ ವೇಳೆ ಅದೇ ಲಾಂಗ್ ನ ಜಯಂತ್ ಬಳಿಯಿಂದ ಕಿತ್ತುಕೊಂಡು ಜಯಂತ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಜಯಂತ್ ಕೈ ಕಟ್ ಆಗಿದೆ.
ಹಲ್ಲೆಗೊಳಾಗದ ಜಯಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಲಾಂಗ್ ಜಯಂತ್ ಕೈ ಸೀಳ್ತಿದ್ದಂತೆ ಮೂರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಸದ್ಯ ಬ್ಯಾಡರಹಳ್ಳಿ ಠಾಣೆಯಲ್ಲಿ ಈ ಘಟನೆ ಕುರಿತು ಎಫ್ ಐ ಆರ್ ದಾಖಲಾಗಿದ್ದು ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.