ಬೆಂಗಳೂರು: ಪವರ್ ಶೇರಿಂಗ್ ಸತ್ಯ ಗೊತ್ತಾಗೋವರೆಗೂ ಕಾಂಗ್ರೆಸ್ʼನಲ್ಲಿ ಕುರ್ಚಿ ಕಾದಾಟ ಮುಂದುವರೆಯುತ್ತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕುರ್ಚಿ ಕಿತ್ತಾಟಕ್ಕೆ ಸುರ್ಜೇವಾಲ ತೇಪೆ ಹಚ್ಚೋಕೆ ಬಂದಿದ್ದಾರೆ. ಅವರು ಬಂದು ಹೋದ್ರು ಇದು ಸರಿ ಹೋಗೊಲ್ಲ. ಪವರ್ ಶೇರಿಂಗ್ ಬಗ್ಗೆ ಸ್ಪಷ್ಟತೆ ಆಗುವವರೆಗೂ ಈ ಗಲಾಟೆ ನಿಲ್ಲೋದಿಲ್ಲ.
ಪವರ್ ಶೇರಿಂಗ್ ಸತ್ಯನಾ ಇಲ್ಲವಾ ಎಂದು ಡಿಕೆಶಿ ಹೇಳಬೇಕು. ಅಲ್ಲಿಯವರೆಗೂ ಈ ಗೊಂದಲ ಮುಗಿಯೊಲ್ಲ. ಪವರ್ ಶೇರಿಂಗ್ ಸತ್ಯ ಗೊತ್ತಾಗೋವರೆಗೂ ಕಾಂಗ್ರೆಸ್ ನಲ್ಲಿ ಕುರ್ಚಿ ಕಾದಾಟ ಮುಂದುವರೆಯಲಿದೆ ಎಂದಿದ್ದಾರೆ.
IAF Recruitment: ಭಾರತೀಯ ವಾಯುಪಡೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಸಿ
ಶಾಸಕಾಂಗ ಪಕ್ಷದ ಸಭೆ ಮುಗಿದ ಮೇಲೆ ಪ್ರೆಸ್ ಮೀಟ್ ನಲ್ಲಿ ಡಿನ್ನರ್ ಮೀಟ್ ಮಾಡಬೇಡಿ. ಸಿಎಂ ವಿರುದ್ಧ ಮಾತಾಡಬೇಡಿ ಎಂದು ಹೇಳ್ತಾರೆ. ಅದಾದ ಎರಡು ದಿನ ಆದ ಮೇಲೆ ಕುರ್ಚಿ ಫೈಟ್ ಮತ್ತೆ ಶುರುವಾಗುತ್ತೆ. ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ. ಬಜೆಟ್ ಆದ ಮೇಲೆ ಈ ಸರ್ಕಾರದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.