ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಶುರುವಾದ ಮೊಬೈಲ್ ಗೀಳು ಇಂದಿಗೂ ನಿಂತಿಲ್ಲ.ಪ್ರತಿಯೊಂದು ಮಗುವೂ ಕೂಡ ಮೊಬೈಲ್ ಗೆ ಅಡಿಕ್ಟ್ ಆಗಿ ಬಿಟ್ಟಿದು. ಇದರಿಂದ ಮಕ್ಕಳ ಮೇಲೆ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಲೆ ಇದ್ದಾರೆ. ಈ ಮಧ್ಯೆ ಮಕ್ಕಳು ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದು ಇನ್ನಿಲ್ಲದಂತೆ ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ (DPDP) ಕಾಯ್ದೆಯ ಕರಡು ನಿಯಮ ರೂಪಿಸಲಾಗಿದ್ದು, ಇದು ಅಂಗೀಕಾರಗೊಂಡರೆ ಶೀಘ್ರದಲ್ಲಿಯೇ ಮಕ್ಕಳ ಜಾಲತಾಣಗಳ ಖಾತೆಗೆ ಬ್ರೇಕ್ ಬೀಳಲಿದೆ.
ಈ ನಿಯಮದ ಅನ್ವಯ 18 ವರ್ಷದ ಒಳಗಿನ ಮಕ್ಕಳು ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ಪ್ರವೇಶಿಸುವಂತಿಲ್ಲ. ಒಂದು ವೇಳೆ ಹಾಗೆ ಮಾಡುವುದು ಅನಿವಾರ್ಯವಾದರೆ, ಪೋಷಕರ ಅಥವಾ ಹಿರಿಯರ ಒಪ್ಪಿಗೆಯನ್ನು ಪಡೆಯುವುದು ಅಗತ್ಯವಾಗಿದೆ. ಮಕ್ಕಳು ಆನ್ಲೈನ್ ಅಕೌಂಟ್ ತೆರೆಯಲು ಹೋದರೆ ಅಲ್ಲಿ ಒಂದು ಬಾಕ್ಸ್ ಓಪನ್ ಆಗುತ್ತದೆ. ಅಲ್ಲಿ ಪೋಷಕರು ತಮ್ಮ ಪಾಸ್ವರ್ಡ್ ಎಂಟರ್ ಮಾಡಿ ಓಕೆ ಎಂದು ಕೊಟ್ಟರೆ ಮಾತ್ರ ಅಂಥ ಅಕೌಂಟ್ ತೆರೆಯಲು ಅನುಮತಿ ನೀಡಲಾಗುತ್ತದೆ. ಒಂದು ವೇಳೆ ಪೋಷಕರ ಬಳಿ ಯಾವುದಾದರೂ ಸೋಷಿಯಲ್ಮೀಡಿಯಾ ಅಕೌಂಟ್ ಇದ್ದರೆ ಅದರಿಂದಲೇ ಲಾಗಿನ್ ಆಗಿ ಮಕ್ಕಳಿಗೆ ಅನುಮತಿ ಕೊಡಬಹುದು.
ಪಾಲಕರ ಬಳಿ ಯಾವುದೇ ಸೋಷಿಯಲ್ ಮೀಡಿಯಾ ಖಾತೆ ಇಲ್ಲದಿದ್ದರೆ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಯಾವುದಾದರನ್ನೂ ಅಪ್ಲೋಡ್ ಮಾಡಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ಸದ್ಯ ಈ ಕರಡು ಪ್ರತಿಯಲ್ಲಿ ಆ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿದ್ದರೂ ಜಾಲತಾಣಗಳ ಮಾಲೀಕರಿಗೆ ನಿಯಮ ರೂಪಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ವಯಸ್ಸಿನ ಬಗ್ಗೆ ಇಲ್ಲವೇ ಪಾಲಕರು ಎಂದು ಯಾರದ್ದಾದರೂ ಬಳಿ ವೆರಿಫಿಕೇಷನ್ ಮಾಡಿಸುವುದು ಎಲ್ಲಾ ಮಾಡಿದರೆ ಮಕ್ಕಳು ಕಾನೂನಾತ್ಮಕ ಸಮಸ್ಯೆಗಳಿಗೆ ಎದುರಾಗಬಹುದು.