ಇತ್ತಿಚೇಗೆ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ.
ಸೈಬರ್ ಕಳ್ಳರು ಫ್ರೇಮ್ವರ್ಕ್, ಸಿಸ್ಟಮ್, Google Play ಸಿಸ್ಟಮ್, RM ಘಟಕಗಳು, MediaTek ಘಟಕಗಳು, ಇಮ್ಯಾಜಿನೇಶನ್ ಘಟಕಗಳು, Qualcomm ಕಾಂಪೊನೆಂಟ್ಗಳು ಮತ್ತು Qualcomm ಕ್ಲೋಸ್-ಸೋರ್ಸ್ಡ್ ಕಾಂಪೊನೆಂಟ್ಗಳಲ್ಲಿ ಇದನ್ನು ಅಳವಡಿಸಿದ್ದಾರೆ. ಇದು Android ಆವೃತ್ತಿ 12, 12L, 13, ಮತ್ತು 14 ರ ಮೇಲೆ ಪರಿಣಾಮ ಬೀರುತ್ತವೆ.
ಭಾರತೀಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಆಸೆ ಇದೆಯೇ : ಹಾಗಾದ್ರೆ ಈಗಲೇ ಅರ್ಜಿ ಸಲ್ಲಿಸಿ
ಇನ್ನು ನಮ್ಮ ಭಾರತದಲ್ಲಿ ಈ ಆವೃತ್ತಿ ಫೋನ್ಗಳನ್ನು ಬಳಕೆ ಮಾಡುವವರ ಸಂಖ್ಯೆ 10 ಮಿಲಿಯನ್ಗಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ. Samsung, Realme, OnePlus, Xiaomi ಮತ್ತು Vivo ನಂತಹ ಬ್ರ್ಯಾಂಡ್ಗಳು ಈ ಸಮಸ್ಯೆ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಸೈಬರ್ ಕಳ್ಳಾಟದಿಂದ ಕಾಪಾಡಲು ಈಗಾಗಲೇ ಭದ್ರತಾ ಪ್ಯಾಚ್ ಬಿಡುಗಡೆ ಮಾಡಲಾಗಿದೆ. ಇದು ಇಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಇದರ ಜತೆಗೆ ಹೆಚ್ಚಿನ ಫೋನ್ ಬ್ರ್ಯಾಂಡ್ಗಳಿಗೆ ಈ ಸಮಸ್ಯೆಗಳ ಕುರಿತು ಸೂಚನೆ ನೀಡುತ್ತದೆ. ಈ ತಂತ್ರದ ಬಗ್ಗೆ ಸೆಟ್ಟಿಂಗ್ಗಳು, ಸಿಸ್ಟಮ್ ಅಪ್ಡೇಟ್, ಸಾಫ್ಟ್ವೇರ್ಗಳಲ್ಲಿ ನವೀಕರಣದ ಮಾಡಲಾಗಿದೆ