ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳ ಬಾಳಲ್ಲಿ ದೀಪದ ಬೆಳಕು ಹಚ್ಚಲು ಕೇಂದ್ರ ಸಜ್ಜಾಗಿದೆ. ಎಸ್, ಕೆಲಸ ಇಲ್ಲ ಅಂತ ಹಬ್ಬದಲ್ಲಿ ಚಿಂತೆ ಮಾಡುತ್ತಾ ಕಾಲ ಕಳೆಯಬೇಡಿ. ಯಾಕಂದ್ರೆ ಕೇಂದ್ರದ PM ನರೇಂದ್ರ ಮೋದಿ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದು ರೀತಿ ಇದು ದೀಪಾವಳಿ ಗಿಫ್ಟ್ ಅಂದುಕೊಂಡರೂ ಪರವಾಗಿಲ್ಲ.
ಅತ್ಯುತ್ತಮ ತನಿಖೆ ನೀಡುವ ಗೃಹಮಂತ್ರಿ ಪದಕಕ್ಕೆ ಈ ಬಾರಿ ಏಳು ಮಂದಿ ಪೊಲೀಸ್ ಅಧಿಕಾರಿಗಳ ಆಯ್ಕೆ.!
ಎಸ್, ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇಡೀ ದೇಶವೇ ಇದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.
ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಪ್ರಸ್ತುತ ಉದ್ಯೋಗ ಹರಸಿ ಗ್ರಾಮಗಳಿಂದ ಪಟ್ಟಣ, ಪಟ್ಟಣಗಳಿಂದ ದೊಡ್ಡ ನಗರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಯುವ ಜನರು ಕೆಲಸ ಹರಸಿ ಬೇರೆಡೆ ತೆರಳುವ ಬದಲಿಗೆ ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಹುಟ್ಟು ಹಾಕಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಬೇಕಿದೆ. ಇದಕ್ಕಾಗಿ ಸರ್ಕಾರವೇ ಬೆಂಬಲ ನೀಡಲಿದೆ.
ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೋದಿ ಸರ್ಕಾರ ಪ್ರಧಾನಮಂತ್ರಿ ಸೃಜನ ಯೋಜನೆ ಅನ್ನು ಆರಂಭಿಸಿದೆ. ಈ ಯೋಜನೆಯಡಿ ಹೊಸದಾಗಿ ಸ್ವಂತ ಉದ್ಯೋಗ ಆರಂಭಿಸಲು ಇಚ್ಛಿಸುವ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಸೃಜನ ಯೋಜನೆ:
ಪ್ರಧಾನಮಂತ್ರಿ ಸೃಜನ ಯೋಜನೆಯಲ್ಲಿ ಉತ್ಪಾದನೆ, ಸೇವಾ ಘಟಕಗಳಿಗೆ ಸಾಲ ಸೌಲಭ್ಯ ನೀಡಲಾಗುವುದು. ವಾಸ್ತವವಾಗಿ, ನಿರುದ್ಯೋಗಕ್ಕೆ ಸೆಡ್ಡು ಹೊಡೆದು ತಮ್ಮದೇ ಆದ ಸ್ವಂತ ಉದ್ಯಮ ಮಾಡಲು ಬಯಸುವ ಯುವ ಪೀಳಿಗೆಗೆ ಆರ್ಥಿಕ ನೆರವು ಒಂದು ದೊಡ್ಡ ಸವಾಲಾಗಿದೆ. ಇಂತಹವರಿಗೆ ಪ್ರಧಾನಮಂತ್ರಿ ಸೃಜನ ಯೋಜನೆಯಡಿ ಆರ್ಥಿಕ ನೆರವು ದೊರಯ್ಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನಿಸಲಾಗಿದೆ.
50ಲಕ್ಷದವರೆಗೆ ಸಾಲ ಸೌಲಭ್ಯ:
ಸ್ವ-ಉದ್ಯೋಗದ ಕನಸು ಕಾಣುವವರಿಗೆ ಪ್ರಧಾನಮಂತ್ರಿ ಸೃಜನ ಯೋಜನೆ ಮೆಟ್ಟಿಲಾಗಿದ್ದು ಇದರಲ್ಲಿ ಹೊಸ ಉದ್ಯಮ ಸ್ಥಾಪಿಸುವವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸುವ ಸರ್ಕಾರ ಗರಿಷ್ಠ 25 ರಿಂದ 35% ಸಬ್ಸಿಡಿಯನ್ನೂ ಒದಗಿಸಲಿದೆ.