ಮಂಡ್ಯ:- ಐಸ್ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಮ್ಮನೇ ಮಕ್ಕಳಿಗೆ ವಿಷ ಹಾಕಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಘಟನೆ ಜರುಗಿದೆ.
ಎಚ್ಚರ.. ಎಚ್ಚರ: ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು!
ತನ್ನ ಮೂವರು ಮಕ್ಕಳಿಗೂ ವಿಶಪ್ರಾಷನ ಮಾಡಿಸಿ, ತಾನೂ ವಿಷ ಸೇವಿಸಿದ್ದಳು. ಆದರೆ ಆಕೆ ಮತ್ತು ಆಕೆಯ ಮೊದಲ ಮಗಳು ಬದುಕಿ ಉಳಿದಿದ್ದು, ಅವಳಿ ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಪೂಜಾ ವಿಷ ಹಾಕಿದ ತಾಯಿಯಾಗಿದ್ದು, ತ್ರಿಶಾ, ತ್ರಿಶೂಲ್ ಸಾವನ್ನಪ್ಪಿದ್ದ ಗಂಡು ಹೆಣ್ಣು ಅವಳಿ ಮಕ್ಕಳಾಗಿದ್ದಾರೆ. ಪೂಜೆ ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆ ಮಕ್ಕಳಿಗೆ ವಿಷ ಹಾಕಿ, ತಾನೂ ಸಾಯಬೇಕು ಎಂದು ಪೂಜಾ ನಿರ್ಧರಿಸಿದ್ದಳು. ಹಾಾಗಾಗಿ ಊಟದಲ್ಲಿ ವಿಷ ಹಾಕಿ, ತಾನೂ ಸೇವಿಸಿ, ಮಕ್ಕಳಿಗೂ ತಿನ್ನಿಸಿದ್ದಳು. ಬಳಿಕ ಮಕ್ಕಳು ಐಸ್ಕ್ರೀಮ್ ತಿಂದಿದ್ದವು.
ಒಂದೂವರೆ ವರ್ಷದ ಅವಳಿ ಮಕ್ಕಳು ಮತ್ತು ಪೂಜಾ ಮತ್ತು ಅವಳ ಮೊದಲ ಮಗಳು ಅನಾರೋಗ್ಯಕ್ಕೀಡಾಗಿದ್ದು. ನಾಲ್ವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಾಗಿತ್ತು. ಪೂಜಾ ಮತ್ತು ಮೊದಲ ಮಗಳು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಆದರೆ ಅವಳಿ ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.