ಸ್ಪೇನ್: ನೋಡ ನೋಡುತ್ತಿದ್ದಂತೆಯೇ ಯುವತಿಯೊಬ್ಬಳ ಗಂಟಲಿನಲ್ಲಿ ರಾತ್ರಿ ತಿಂದ ಆಹಾರ ಸಿಕ್ಕಿಕೊಂಡಿದೆ. ಗಂಟಲು ನೋವಿನಿಂದಾಗಿ ಬೆಳಿಗ್ಗೆ ಹಲ್ಲುಜ್ಜುವ ಸಮಯದಲ್ಲಿ ಬ್ರಷ್ ಸಹಾಯದಿಂದ ಸಿಕ್ಕಿಕೊಂಡಿರುವ ಆಹಾರ ಹೊರತೆಗೆಯಲು ಪ್ರಯತ್ನಿಸಿದ್ದಾಳೆ. ಪರಿಣಾಮ ಹಲ್ಲುಜ್ಜುವ ಬ್ರಷ್ ಆಕೆಯ ಗಂಟಲಲ್ಲಿ ಸಿಕ್ಕಿಕೊಂಡಿದೆ. ಈ ಸಮಯದಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು,ತಕ್ಷಣ ಆಕೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು ಮೂರ್ನಾಲ್ಕು ಗಂಟೆಗಳ ವೈದ್ಯರ ಹರಸಾಹಸದ ನಂತರ ಬ್ರಷ್ ಹೊರಕ್ಕೆ ತೆಗೆಯಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ವರದಿಗಳ ಪ್ರಕಾರ ನವೆಂಬರ್ 29 ರಂದು ಈ ಘಟನೆ ನಡೆದಿದೆ. ಯುವತಿ ರಾತ್ರಿ ಊಟದ ವೇಳೆ ಮಾಂಸವನ್ನು ತಿಂದಿದ್ದಳು. ಆದರೆ ಮಾಂಸದ ಮೂಳೆ ಗಂಟಲಿಗೆ ಸಿಲುಕಿಕೊಂಡಿದ್ದು,ಉಸಿರಾಡಲು ಕಷ್ಟ ಪಡುವಂತಾಗಿದೆ. ಆದರೆ ಬೆಳಿಗ್ಗೆ ಹಲ್ಲುಜ್ಜುವ ಸಮಯದಲ್ಲಿ ಬ್ರಷ್ ಬಳಸಿ ಆಹಾರ ಹೊರತೆಗೆಯಲು ಪ್ರಯತ್ನಿಸಿದ್ದಾಳೆ. ಪರಿಣಾಮ 8 ಇಂಚಿನ ಟೂತ್ ಬ್ರಷ್ ಆಕೆಯ ಗಂಟಲಲ್ಲಿ ಸಿಕ್ಕಿಕೊಂಡಿದೆ. ಆಕೆಯ ಒದ್ದಾಟ ಕಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಕೂಡ ಅವರ ಸ್ಥಿತಿಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ಹೆಬ್ಬೂರು ಪೊಲೀಸರ ಕಾರ್ಯಾಚರಣೆ: ಐದು ಪೊಲೀಸ್ ಠಾಣೆಗೆ ಬೇಕಿದ್ದ ಕಳ್ಳ ಅರೆಸ್ಟ್
ಅಂತಿಮವಾಗಿ, ಮೂರು ಗಂಟೆಗಳ ಪರೀಕ್ಷೆ ಮತ್ತು 40 ನಿಮಿಷಗಳ ಪ್ರಯತ್ನದ ನಂತರ, ವೈದ್ಯರು ಆಕೆಯ ಗಂಟಲಲ್ಲಿ ಸಿಲುಕಿಕೊಂಡಿದ್ದ ಬ್ರಷ್ ಅನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಂಟಲಿನ ಶಸ್ತ್ರಚಿಕಿತ್ಸೆಗೆ ಇಲ್ಲದೆ ಶಸ್ತ್ರಚಿಕಿತ್ಸಾ ಉಪಕರಣದ ಸಹಾಯದಿಂದ ವೈದ್ಯರು ಬ್ರಷ್ ಅನ್ನು ಹೊರತೆಗೆದರು. ಕೆಲ ಹೊತ್ತಿನ ಬಳಿಕ ಮಹಿಳೆಗೆ ಪ್ರಜ್ಞೆ ಬಂದಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.