ಬೆಂಗಳೂರು:- ಮದುವೆಯ ದಿನವೇ ಕಂಠಪೂರ್ತಿ ವರ ಕುಡಿದು ಬಂದ ಹಿನ್ನೆಲೆ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ಈ ಕೆಲಸ ಮಾಡದಿದ್ರೆ CT ರವಿ ಕೊಲೆ ಗ್ಯಾರಂಟಿ: ಬಿಜೆಪಿ MLC ಕಚೇರಿಗೆ ಬಂದ ಬೆದರಿಕೆ ಪತ್ರ ಎಲ್ಲಿಂದ!?
ಬೆಂಗಳೂರು ನಗರದಲ್ಲಿ ವರನ ವರ್ತನೆಗೆ ಮದುವೆಯೇ ಕ್ಯಾನ್ಸಲ್ ಆಗಿಬಿಟ್ಟಿದೆ. ಮದುವೆ ದಿನವೇ ಫ್ರೆಂಡ್ಸ್ ಜೊತೆ ಕುಡಿದು ವರ ಬಂದಿದ್ದ. ಕೆಲ ಶಾಸ್ತ್ರಗಳನ್ನು ಮಾಡುವ ಸಂದರ್ಭದಲ್ಲಿ ಹುಚ್ಚನ ರೀತಿಯಲ್ಲಿ ವರ್ತಿಸಿದ್ದ. ಇದೆಲ್ಲವನ್ನು ಕಂಡು ವಧು ಕೆಂಡಮಂಡಲವಾಗಿದ್ದಾಳೆ.
ತಕ್ಷಣ ಎದ್ದು ನಿಂತು ಮದುವೆಗೆ ಬಂದಿದ್ದವರಿಗೆ ವಧು ಕ್ಷಮೆ ಯಾಚಿಸಿ, ನಿಮ್ಮೆಲ್ಲಾರಿಗೂ ನಾನು ಕ್ಷಮೆ ಕೇಳುತ್ತೇನೆ ನಾನು ಈ ಮದುವೆ ಆಗುತ್ತಿಲ್ಲ” ಎಂದು ಹೇಳಿದ್ದಾಳೆ.
ನಂತರ ವರನ ಕಡೆಯವರು ಕೂತು ಮಾತನಾಡುವ ಪ್ರಯತ್ನಪಟ್ಟರು ನೋ ಯೂಸ್ ಆಗಿದೆ. ನಮ್ಮ ಮಗಳ ಜೀವನ ಹಾಳಾಗುತ್ತದೆ ಎಂದು ಹೇಳಿ ಪೋಷಕರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ವಧು ನೆರೆದಿದ್ದವರಿಗೆ ಕ್ಷಮೆ ಕೇಳುತ್ತಿರುವ ವಿಡಿಯೋ ಫುಲ್ ವೈರೆಲ್ ಆಗಿದೆ.