ಚಂಡೀಗಢ: ಮದುವೆಯಾದ ಮರುದಿನವೇ 1.5 ಲಕ್ಷ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಅತ್ತೆ ಮನೆಯಿಂದ ವಧು ಪರಾರಿಯಾದ (Bride Escape With Gold And Jewellery) ಘಟನೆ ಗುರುಗ್ರಾಮದ ಬಿಲಾಸ್ಪುರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ವರನ ತಂದೆ ಅಶೋಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ತನ್ನ ಕಿರಿಯ ಮಗನಿಗೆ ಮದುವೆಯಾಗಬೇಕು. ಹೀಗಾಗಿ ಹುಡುಗಿ ಹುಡುಕುವಂತೆ ಸಂಬಂಧಿಕರ ಬಳಿ ಹೇಳಿದ್ದೆ. ಅಂತೆಯೇ ಸಂಬಂಧಿಕ ಮನಿಶ್ ಎಂಬಾತ ಮಂಜುವನ್ನು ಪರಿಚಯ ಮಾಡಿಕೊಟ್ಟಿದ್ದು, ಆತ ಒಬ್ಬಳು ಹುಡುಗಿಯನ್ನು ತೋರಿಸಿದ್ದಾನೆ. ನಿಮ್ಮ ಮಗನಿಗೆ ಈಕೆ ಸರಿಯಾದ ಜೋಡಿಯಾಗುತ್ತಾಳೆ ಎಂದು ತಿಳಿಸಿದ್ದಾನೆ ಎಂದು ಹೇಳಿದರು.
ಅಲ್ಲದೆ ಯುವತಿ ಕುಟುಂಬ ಬಡತನದಿಂದ ಕೂಡಿದ್ದು, ಅವರ ಬಳಿ ಹಣವಿಲ್ಲ ಎಂದು ಮಂಜು ಮತ್ತು ಆತನ ಸಹಚರರು ತಿಳಿಸಿದ್ದಾರೆ. ಇದಕ್ಕೆ ಅಶೋಕ್ ಕುಮಾರ್ ತನ್ನ ಕುಟುಂಬಕ್ಕೆ ವರದಕ್ಷಿಣೆ ಬೇಡ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಪ್ರೀತಿ ನನ್ನ ಮನೆಯವರಿಗೆ ಇಷ್ಟವಾದ ನಂತರ ನಾನು ಆಕೆಯ ಕುಟುಂಬಕ್ಕೆ 1 ಲಕ್ಷ ಮತ್ತು ಕೆಲವು ಬಟ್ಟೆಗಳನ್ನು ನೀಡಿದ್ದೇನೆ. ಮದುವೆಯ ನಂತರ ಮನೆಯಲ್ಲಿ ತಡರಾತ್ರಿಯವರೆಗೂ ಸಂಭ್ರಮಾಚರಣೆ ಇತ್ತು. ಎಂದಿನಂತೆ ಮರುದಿನ ಬೆಳಗ್ಗೆ ಮಗ ಕೆಲಸಕ್ಕೆ ತೆರಳಿದ್ದಾನೆ. ಈ ವೇಳೆ ಸೊಸೆ ಪ್ರೀತಿ ನಾಪತ್ತೆಯಾಗಿದ್ದಾಳೆ ಎಂದು ಕುಮಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದರು.
MP Renukacharya: ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ಎಂಪಿ ರೇಣುಕಾಚಾರ್ಯ ವಾಗ್ದಾಳಿ
ಸೊಸೆ ಕಾಣೆಯಾದ ಬಳಿಕ ಮನೆ ಪರಿಶೀಲನೆ ನಡೆಸಿದೆವು. ಈ ವೇಳೆ 1.5 ಲಕ್ಷ ನಗದು ಹಾಗೂ ಚಿನ್ನಾಭರಣಗಳು ಕೂಡ ಕಾಣೆಯಾಗಿದ್ದು, ಪ್ರೀತಿ ಅದರೊಂದಿಗೆ ಓಡಿ ಹೋಗಿರುವುದು ಬಯಲಾಯಿತು. ಇತ್ತ ಸಂಬಂಧ ಮಾಡಿದ್ದ ಮಂಜುಗೆ ಈ ವಿಚಾರ ತಿಳಿಸಲಾಯಿತು. ಆದರೆ ಆತ ಕೊಲೆ ಬೆದರಿಕೆ ಹಾಕಿದ ಎಂದು ಪೊಲೀಸರಿಗೆ ಆಶೋಕ್ ಕುಮಾರ್ ತಿಳಿಸಿದ್ದಾರೆ. ಘಟನೆ ಬಳಿಕ ಪ್ರೀತಿ, ಮಂಜು ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಬಿಲಾಸ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.