ಕಲಘಟಗಿ: ತಾಲೂಕಿನ ಬೇಗೂರು ಗ್ರಾಮದ ನಿಂಗಪ್ಪ ದೊಡಮನಿಯವರು ಭೂಸೇನೆಯಲ್ಲಿ ಕಳೆದ 24 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಹಿನ್ನೆಯಲ್ಲಿ ಊರಿನ ಗ್ರಾಮಸ್ಥರು ಮೆರವಣಿಗೆ ಮುಖಾಂತರ ಅದ್ದೂರಿಯಾಗಿ ಬರಮಾಡಿಕೊಂಡರು.
ಗ್ರಾಮ ಪಂಚಾಯತಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಭವ್ಯವಾದ ಸ್ವಾಗತ ದೊರೆಯಿತು. ಗ್ರಾಮದ ಹುತಾತ್ಮ ವೀರ ಯೋಧನ ಪುತ್ಥಳಿಗೆ ಹೂವಿನ ಹಾರ ಹಾಕಿ ನಿಂಗಪ್ಪ ದೊಡ್ಡಮನಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಸವರಾಜ್ ಕಟ್ಟಪ್ಪಗೌಡ್ರು, ಮಲ್ಲಿಕಾರ್ಜುನ ದನಿಗೊಂಡ, ಮಡಿವಾಳಪ್ಪ ನೂಲ್ವಿ, ಬಸವಣ್ಣಪ್ಪ ಬೋಳಣ್ಣವರ್,
Navratri 2024: ನವರಾತ್ರಿಯ 9 ದಿನಗಳು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಇಲ್ಲಿದೆ ನೋಡಿ!
ನಿಂಗಪ್ಪ ನಿಗದಿ, ಬಸವರಾಜ್ ಮುಗನ್ನವರ್, ಫಕೀರಪ್ಪ ಸುಣಗಾರ, ನಿಂಗಪ್ಪ ಕೆಲಗೇರಿ, ಬಸವರಾಜ್ ಸುಳದ, ಮಾಜಿ ಸೈನಿಕರಾದ ಚನ್ನಪ್ಪ ಕಾಮಧೇನು, ಈರಪ್ಪ ರೊಟ್ಟಿ, ಮಂಜುನಾಥ್ ಬೋಳಣ್ಣವರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುರುನಾಥ್ ಹರಿಜನ, ಗ್ರಾಮದ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ರಾಥೋಡ್, ಪ್ರಭು ಅಂಗಡಿ, ಡಾ:ಸುರೇಶ್ ಕಳಸಣ್ಣವರ, ಗಿರೀಶ್ ಬಂಡಿ, ಉಪಸ್ಥಿತರಿದ್ದರು.
ವರದಿ: ಮಾರುತಿ ಲಮಾಣಿ