ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿರುವ ಘಟನೆ ರಾಯಚೂರು ನಗರದ ಸಂತೋಷಿ ಸರೋವರ ಲಾಡ್ಜ್ ನಲ್ಲಿ ನಡೆದಿದೆ. ಲಾಡ್ಜ್ ನಲ್ಲಿ ಕೆಲಸ ಮಾಡ್ತಿದ್ದ ಸೋನಿ (23) ಮೃತ ಮಹಿಳೆಯಾಗಿದ್ದು, ಉತ್ತರಪ್ರದೇಶದ ನಗಲಬಾರಿ ಜಿಲ್ಲಾ ಅತ್ರಾಸ್ ಮೂಲದ ಮಹಿಳೆಯಾಗಿದ್ದಾಳೆ.
ಲಾಡ್ಜ್ ನ ರೂಮ್ ನಂಬರ್ 113 ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳಕ್ಕೆ ರಾಯಚೂರು ಎಸ್.ಪಿ ನಿಖಿಲ್ ಭೇಟಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಸೋನಿ ಪತಿ ಅವಿನಾಶ್ ನನ್ನು ವಿಚಾರಣೆ ನಡೆಸಿ ತನಿಖೆ ಕೈಗೊಂಡಿದ್ದಾರೆ.