ಕಲಬುರಗಿ:- ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನೊಬ್ಬ ಬರ್ಬರವಾಗಿ ಹತ್ಯೆಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಮಲಾಪುರ ತಾಲೂಕಿನ ಓಕಳಿ ಗ್ರಾಮದ ಬಳಿ ಘಟನೆ ನಡೆದಿದ್ದು ಜೇವರ್ಗಿ ಮೂಲದ ಅಂಬಾರಾಯ ಹತ್ಯೆಯಾದ ದುರ್ದೈವಿ ಯುವಕ ಎನ್ನಲಾಗಿದೆ.
ಹೆಂಡತಿಯ ತವರೂರು ಬೆಳಕೋಟಾದಲ್ಲಿ ವಾಸವಿದ್ದ ಅಂಬಾರಾಯ ಡಿಸೆಂಬರ್ 29 ರಂದು ನಾಪತ್ತೆಯಾಗಿದ್ದ. ಬರೋಬ್ಬರಿ ನಾಲ್ಕು ದಿನಗಳ ಬಳಿದ ಮೃತದೇಹ ಪತ್ತೆಯಾಗಿದೆ.
ಪ್ರಕರಣ ದಾಖಲಿಸಿಕೊಂಡ ಕಮಲಾಪುರ ಪೋಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ..