ಮಡಿಕೇರಿ:- ಕೊಳೆತ ಸ್ಥಿತಿಯಲ್ಲಿ ಗಂಡಾನೆ ಮೃತದೇಹ ಪತ್ತೆಯಾಗಿರುವ ಘಟನೆ ಮಡಿಕೇರಿಯ ದುಬಾರೆಯ ಕಾಡಿನೊಳಗೆ ಜರುಗಿದೆ.
ಸುಮಾರು 15 ದಿನಗಳಿಗೂ ಹಿಂದೆ ಮೃತಪಟ್ಟಿರುವ ಈ ಕಾಡಾನೆಯ ದೇಹ ಸಂಪೂರ್ಣ ಕೊಳೆತು ಹೋಗಿದೆ. ಆನೆಯ ಎರಡೂ ದಂತಗಳು ಸಿಕ್ಕಿವೆ.
ಕಾಲಿಗೆ ಗಾಯವಾಗಿ ಕುಂಟುತ್ತಾ ಹೋಗುತ್ತಿದ್ದ ಆನೆಯೊಂದನ್ನು ಇತ್ತೀಚೆಗೆ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಬಹುಶಃ ಅದೇ ಆನೆ ಇರಬಹುದು ಎಂದು ಅಂದಾಜು ಮಾಡಲಾಗಿದೆ’ ಎಂದು ತಿಳಿಸಿದರು.
ಆನೆಕಾಡಿಗೆ ಕುರುಡು ಆನೆ ಮೃತದೇಹ
ಶುಕ್ರವಾರ ರಾತ್ರಿ ಮೃತಪಟ್ಟಿದ್ದ ಕಣ್ಣು ಕಾಣದೇ ಅಲೆಯುತ್ತಿದ್ದ ಹೆಣ್ಣಾನೆಯ ಮೃತದೇಹವನ್ನು ಕುಶಾಲನಗರ ಸಮೀಪದ ಆನೆಕಾಡಿಗೆ ತರಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಗರ್ಭಿಣಿ ಅಲ್ಲ ಎಂದು ಖಚಿತಗೊಂಡಿತು