ಕಲಬುರ್ಗಿ:- ರಾಮನ ಭಕ್ತರಲ್ಲದವರಿಗೆ ಮಂದಿರ ಉದ್ಘಾಟನೆಗೆ ಆಹ್ವಾನ ಇಲ್ಲ ಎಂಬ ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಕೈ ಶಾಸಕ ಅಲ್ಲಮಪ್ರಭು ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.
ಕಲಬುರಗಿಯಲ್ಲಿಂದು ಮಾತನಾಡಿದ ಪಾಟೀಲ್ ಬಿಜೆಪಿಯವರು ರಾಮನ ಭಕ್ತರಲ್ಲ ಓಟಿನ ಭಕ್ತರು ಅತ ತಿರುಗೇಟು ಕೊಟ್ಟಿದ್ದಾರೆ.
ನಿಜವಾಗಿ ನಾವು ರಾಮನ ಭಕ್ತರು ಅವರಲ್ಲ ಅಂತ ಕಿಡಿಕಾರಿದ ಪಾಟೀಲ್ ಅವರು ಒಂದಿನವಾದ್ರೂ ಗುಡಿಗೆ ಹೋಗಿದ್ದಾರಾ ಕೇಳಿ ನಾನು ದಿನವೂ ರಾಮನ ಗುಡಿಗೆ ಹೋಗ್ತೀನಿ ಹೀಗಾಗಿ ಕೇವಲ ರಾಜಕೀಯಕ್ಕಾಗಿ ರಾಮನ ಹೆಸರು ಹೇಳೋದು ಸರಿಯಲ್ಲ ಎಂದರು.