ಮಂಡ್ಯ : ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದ್ರೆ ರಾಜ್ಯದ ಜನತೆಗೆ ಕೇಂದ್ರದಿಂದ ಬರ ಪರಿಹಾರ ಕೊಡಿಸಲಿ ಅದನ್ನ ಬಿಟ್ಟು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅವ್ರಿಗೆ ಬುದ್ಧಿ ಭ್ರಮಣೆ ಆಗಿದೆ. ಅವರಿಗೆ ನಿಜವಾಗಿಯೂ ಮಾನ ಮರ್ಯಾದೆ ಇಲ್ಲ. ನಮಗೆ ಕುಡಿಯಲು ನೀರಿಲ್ಲ, ತಮಿಳುನಾಡಿಗೆ ಯಾಕೆ ಬಿಡೋಣ ಎಂದು ಗರಂ ಆದರು. ಶಿವ ಡ್ಯಾಂನಲ್ಲಿ ನೀರೆತ್ತಲು ನೀರು ಹರಿಸಲಾಗಿದೆ ನಮ್ಮ ರೈತರಿಗೆ ನಮ್ಮ ಕೈಲಿ ನೀರು ಕೊಡಲು ಆಗ್ತಿಲ್ಲ. ಇನ್ನು ತಮಿಳುನಾಡಿಗೆ ನೀರನ್ನ ಎಲ್ಲಿಂದ ಕೊಡೋದು. ತೆಲಂಗಾಣದವರು ನೀರಿಗಾಗಿ ಮನವಿ ಮಾಡ್ತಿದ್ದಾರೆ ನಾವು ನಿಮಗೆ ಕೊಡ್ತೀವಿ, ನೀವು ನಮಗೆ ಕೊಡಿ ಅಂತಿದ್ದಾರೆ ಅದರ ಬಗ್ಗೆ ಯೋಚನೆ ಮಾಡ್ತಿದ್ದೀವಿ ಎಂದರು.
ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಟೆನ್ಷನ್ : ಪ್ರತಾಪ್ ಸಿಂಹ ಬದಲು ರಾಜಮನೆತನಕ್ಕೆ ಮೈಸೂರು ಫಿಕ್ಸಾ..!
ದೇವೇಗೌಡ್ರು ಮತ್ತು ಬಿಜೆಪಿ ಅವರು ಮೊದಲು ಮೇಕೆದಾಟು ಕಾಮಗಾರಿಗೆ ಅನುಮತಿ ಕೊಡಿಸಲಿ. ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಈ ರೀತಿ ಮಾಡ್ತಿದ್ದಾರೆ ನಮ್ಮನ್ನು ದಡ್ಡರು ಎಂದು ಕೊಂಡಿದ್ದಿರಾ? ಮೊದಲು ಜನತೆಗೆ ಕುಡಿಯುವ ನೀರು ಕೊಡಬೇಕಾದದ್ದು ನಮ್ಮ ಆದ್ಯತೆಯಾಗಿದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲ್ಲವೆಂದು ಸ್ಪಷ್ಟಪಡಿಸಿದರು.
ಇನ್ನು ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಲಾಗುವುದು ಎಂಬ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಂವಿಧಾನದ ವಿರೋಧಿ ಬಿಜೆಪಿ ಪಿಎಂ ಕೈಲಿ ಒಂದು ಸ್ಟಾಂಪ್ ಹಾಕಿಸಿ ಸಾಕು. ಆಮೇಲೆ ಮುಂದಿನ ಕಥೆ ನೋಡುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಗಿರೀಶ್ ರಾಜ್ ಮಂಡ್ಯ