ಮಂಡ್ಯ: ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath Narayan), ಭೈರತಿ ಬಸವರಾಜ್, ನಾರಾಯಣಗೌಡ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಒಳಗೊಂಡ ಬಿಜೆಪಿ ಸತ್ಯಶೋಧನಾ ಸಮಿತಿ ಇಂದು ನಾಗಮಂಗಲ ಗಲಭೆ (Nagamangala Violence) ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ.
Hubballi: ಶೀಘ್ರವೇ ರಾಜ್ಯದಲ್ಲಿ ವೃತ್ತಿಪರ ಸಿವಿಲ್ ಎಂಜಿನಿಯರ್ಸ್ ಕಾಯ್ದೆ ಜಾರಿಗೆ: ಸತೀಶ್ ಜಾರಕಿಹೊಳಿ!
ಇತ್ತೀಚೆಗಷ್ಟೇ ಗಣೇಶ ಮೂರ್ತಿ (Ganesh Idol) ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಉಂಟಾಗಿದ್ದ ನಾಗಮಂಗಲ ಗಲಭೆಯ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲು ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಆ ದಿನ ಏನಾಯ್ತು ಅನ್ನೋ ಬಗ್ಗೆ ಇಂಚಿಂಚೂ ಮಾಹಿತಿ ಕಲೆಹಾಕಲಿದೆ. ಇದರೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಬದ್ರಿಕೊಪ್ಪಲು ಬಡಾವಣೆಗೂ ಸಮಿತಿ ಭೇಟಿ ನೀಡಲಿದೆ. ಗಣೇಶ ಮೂರ್ತಿ ವಿಸರ್ಜನಾ ಮೆರವಣಿಯು ಆರಂಭದಿಂದ ಅಂತ್ಯದ ವರೆಗೆ ಏನೆಲ್ಲಾ ಆಯ್ತು ಅನ್ನೋದರ ಬಗ್ಗೆ ಸತ್ಯಶೋಧನಾ ಸಮಿತಿ ಮಾಹಿತಿ ಕಲೆಹಾಕಲಿದೆ.
ನಂತರ ಗಲಭೆಯಲ್ಲಿ ಹಾನಿಗೊಳಗಾದ ಅಂಗಡಿ ಮಳಿಗೆಗಳ ಪರಿಶೀಲನೆ ನಡೆಸಲಾಗುತ್ತದೆ. ಜೊತೆಗೆ ಸಂತ್ರಸ್ತರ ಆರ್ಥಿಕ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿ ಸಾಂತ್ವನ ಹೇಳಲಾಗುತ್ತದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳ ಸಂಗ್ರಹ ಮಾಡಲಿರುವ ಸತ್ಯಶೋಧನಾ ತಂಡ, ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಅಮಾಯಕರ ಬಗ್ಗೆಯೂ ವಿಚಾರಿಸಿ, ಮುಂದಿನ ಕಾನೂನು ಹೋರಾಟದ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚಿಸಲಿದೆ.