ರಿಂಕು ಉತ್ತಮ ಆಟಗಾರ, ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಕನ್ನಡಿಗ ಕೆಎಲ್ ರಾಹುಲ್ ಹೇಳಿದ್ದಾರೆ.
ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನಾದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಎಲ್ ರಾಹುಲ್ ಮಾತನಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನಗಳಲ್ಲಿ ರಿಂಕು ಸಿಂಗ್ ನಂ.6 ರಲ್ಲಿ ಬ್ಯಾಟ್ ಮಾಡಬಹುದೇ ಎಂದು ರಾಹುಲ್ ಕೇಳಿದ ಪ್ರಶ್ನೆಗೆ,”ರಿಂಕು ಎಂತಹ ಉತ್ತಮ ಆಟಗಾರ ಎಂಬುದನ್ನು ತೋರಿಸಿದ್ದಾರೆ. ಐಪಿಎಲ್ನಲ್ಲಿ ಅವರನ್ನು ಎಷ್ಟು ನುರಿತವರು ವೀಕ್ಷಿಸಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಟಿ20 ಸರಣಿಯಲ್ಲಿ ತೋರಿದ ಪ್ರದರ್ಶನ ಮತ್ತು ಒತ್ತಡವನ್ನು ನಿಯಂತ್ರಿಸುವ ರೀತಿ ಉತ್ತಮವಾಗಿದೆ. ಇದು ನೋಡಲು ಉಲ್ಲಾಸದಾಯಕವಾಗಿತ್ತು. ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಹೀಗಾಗಿ ಅವರು ಅವಕಾಶಗಳನ್ನು ಸೃಷ್ಠಿಸಿಕೊಳ್ಳುತ್ತಾರೆ” ಎಂದಿದ್ದಾರೆ.
2023ರ ಐಪಿಎಲ್ ಆವೃತ್ತಿಯ ಪ್ರದರ್ಶನದಿಂದ ರಾಷ್ಟ್ರೀಯ ತಂಡದಲ್ಲಿ ರಿಂಕು ಅವಕಾಶ ಪಡೆದುಕೊಂಡರು. ವೆಸ್ಟ್ ಇಂಡೀಸ್ ಪ್ರವಾಸ, ಐರ್ಲೆಂಡ್ ಪ್ರವಾಸ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಏಕದಿನ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ರಿಂಕು 6ನೇ ಸ್ಥಾನದಲ್ಲಿ ಫಿನಿಶರ್ ಸ್ಥಾನ ತುಂಬಲಿದ್ದಾರೆ.