ಅಡುಗೆ ಮನೆಯ ಕೆಲವು ಆಹಾರ ಪದಾರ್ಥಗಳು ನಮಗೆ ಅದ್ಭುತವಾಗಿ ಕೆಲಸ ಮಾಡುತ್ತವೆ ಎನ್ನುವುದಕ್ಕೆ ಕರಿಬೇವಿನ ಸೊಪ್ಪು ಒಂದು ಉದಾಹರಣೆ. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೆ ಪಡೆದು ಕೊಳ್ಳು ತ್ತಿದ್ದೇವೆ.ಆದರೆ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಲಾಭಗಳನ್ನು ನಾವು ಕಂಡುಕೊಳ್ಳಬಹುದು.ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚವಿ ದ್ದಂತೆ!ಹಲವು ಆಯಾಮಗಳಲ್ಲಿ ಇದರಿಂದ ನಾವು ಆರೋಗ್ಯಕ್ಕೆ ಸಹಕಾರವನ್ನು ನಿರೀಕ್ಷಿಸಬಹುದು.
ನಾವು ಬೆಳಗ್ಗೆ ಎದ್ದಾಗ ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದರ ಮೇಲೆ ನಮ್ಮ ಆರೋಗ್ಯವು ಅವಲಂಬಿತವಾಗಿರುತ್ತದೆ. ಹಾಗಾಗಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹೆಚ್ಚಿನ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಕರಿಬೇವಿನ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
ಕರಿಬೇವಿನ ಎಲೆಗಳು ಆಂಟಿ-ಆಕ್ಸಿಡೆಂಟ್ಗಳನ್ನು ಹೊಂದಿದ್ದು, ಇದು ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಇ, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಬೀಟಾ ಕ್ಯಾರೋಟಿನ್, ಪ್ರೊಟೀನ್, ಉರಿಯೂತದ ಗುಣಲಕ್ಷಣಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿವೆ. ಈ ಅಂಶಗಳಿಂದಾಗಿ ಕರಿಬೇವಿನ ಎಲೆಗಳು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕರಿಬೇವಿನ ಎಲೆಗಳು ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ತಡೆಯುತ್ತದೆ. ಕರಿಬೇವು ತಿನ್ನುವುದರಿಂದ ದೃಷ್ಟಿಗೆ ಒಳ್ಳೆಯದು. ಹಲವು ಸೋಂಕಿನ ವಿರುದ್ಧ ಹೋರಾಡಲು ಕರಿಬೇವು ಉಪಯುಕ್ತವಾಗಿದೆ. ಕರಿಬೇವು ತೂಕ ನಷ್ಟಕ್ಕೆ ವರವೆಂದು ಪರಿಗಣಿಸಲಾಗಿದೆ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದು ಚಯಾಪಚಯವನ್ನು ಸುಧಾರಿಸುತ್ತದೆ. ಕರಿಬೇವಿನ ಎಲೆಗಳು ಕೂಡ ತೂಕ ಇಳಿಕೆಗೆ ಸಹಕಾರಿ ಆಗಿದೆ. ಇದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉಪಯುಕ್ತ: ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿ. ಈ ಎಲೆಗಳನ್ನು ಅಗಿಯುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ನಿಯಂತ್ರಿಸಲ್ಪಡುತ್ತದೆ. ಮಧುಮೇಹ ನಿರ್ವಹಣೆಗೆ, ಕರಿಬೇವಿನ ಎಲೆಗಳನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅಗಿಯುವುದು ಒಳ್ಳೆಯದು.
ಕೂದಲು ಬಲಗೊಳ್ಳುತ್ತದೆ: ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಬೀಟಾ-ಕ್ಯಾರೋಟಿನ್ ಮತ್ತು ಪ್ರೋಟೀನ್ ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಉತ್ತಮ ಮೌಖಿಕ ನೈರ್ಮಲ್ಯ: ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಿಬೇವಿನ ಎಲೆಗಳನ್ನು ಜಗಿಯಬಹುದು. ಕರಿಬೇವಿನ ಎಲೆಗಳನ್ನು ಅಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ ಮತ್ತು ಬಾಯಿಯನ್ನು ಸ್ವಚ್ಛವಾಗಿಡುತ್ತದೆ.
ಚರ್ಮದ ಸಮಸ್ಯೆ: ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರಿಬೇವು ಕಣ್ಣುಗಳು ಮತ್ತು ಯಕೃತ್ತಿಗೆ ಸಹ ಪ್ರಯೋಜನಕಾರಿಯಾಗಿದೆ. ಕರಿಬೇವು ಎಲೆ ನೆಗಡಿ ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ.