ಬೆಂಗಳೂರು:- ನಗರದ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯ ಅನ್ವರ್ ಲೇಔಟ್ನಲ್ಲಿ ಅಣ್ಣನಿಂದಲೇ ತಮ್ಮನ ಬರ್ಬರ ಕೊಲೆ ನಡೆದಿರುವ ಘಟನೆ ಜರುಗಿದೆ.
ಜ.12 ಕ್ಕೆ ವನಶ್ರೀ ಜಯದೇವ ಜಗದ್ಗುರುಗಳ 8 ನೇ ಪುಣ್ಯಸ್ಮರಣೆ, ಶ್ರೀಗಳ ಪ್ರಣವ ಮಂಟಪ, ವೃತ್ತ ಲೋಕಾರ್ಪಣೆ
28 ವರ್ಷದ ಅಕ್ರಂ ಬೇಗ್ ಹತ್ಯೆಗೈದ ಸೋದರ ಎನ್ನಲಾಗಿದೆ. ಘಟನೆ ಕುರಿತು ಅಕ್ರಂ ಬೇಗ್ ತಾಯಿ ನೀಡಿದ್ದ ದೂರು ಸಂಬಂಧ ಆರೋಪಿ ಅಕ್ಬರ್ ಬೇಗ್ನನ್ನು ಕೆಜಿ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಾಯಿ ಅಮ್ರಿಜ್ ಬೇಗ್ಗೆ ಮೂವರು ಮಕ್ಕಳು. ಹಿರಿಯ ಪುತ್ರ ಅಕ್ಬರ್ ಮತ್ತು ಮಗಳು ಬೇರೆ ಕಡೆ ವಾಸವಿದ್ದರು. ತಾಯಿಯ ಜೊತೆ ಕಿರಿಯ ಪುತ್ರ ಅಕ್ರಂ ಬೇಗ್ ಒಬ್ಬನೇ ವಾಸವಿದ್ದ. ಅಕ್ರಂ ಪ್ರತಿದಿನ ಕುಡಿದು ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ. ಮೊನ್ನೆ ರಾತ್ರಿಯೂ ಕುಡಿದು ಬಂದು ತಾಯಿ ಜತೆ ಜಗಳ ಮಾಡಿದ್ದಾನೆ.
ಇದೇ ವೇಳೆ ಹಿರಿಯ ಪುತ್ರ ಅಕ್ಬರ್ ಮನೆಗೆ ಬಂದಿದ್ದ. ಸಹೋದರನ ಜಗಳದಿಂದ ಬೇಸತ್ತು ಅಡುಗೆ ಮನೆಯಲ್ಲಿದ್ದ ಚಾಕು ತಂದು ಅಕ್ರಂ ಮೇಲೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅಕ್ರಂ ಮೃತಪಟ್ಟಿದ್ದಾರೆ.