ಕೋಲಾರ;- 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಐಜಿಪಿ ರವಿಕಾಂತೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಕೋಲಾರದಲ್ಲಿ ಕೊಲೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಐಜಿಪಿ ರವಿಕಾಂತೇಗೌಡ, ಈ ಪ್ರಕರಣದಲ್ಲಿನ ಆರೋಪಿಗಳು ಈ ಹಿಂದೆ ಅದೇ ಬಾಲಕನ ಮೇಲೆ ಹಲ್ಲೆ ಮಾಡಿರುತ್ತಾರೆ. ಅಲ್ಲದೇ ಆರೋಪಿ ಬೇರೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾನೆ. ನಂತರ ಬಾಲಾಪರಾಧಿ ಕೇಂದ್ರದಿಂದ ಹೊರಗೆ ಬರುತ್ತಾನೆ. ಹೊರಪ್ರಕರಣ ರೂವಾರಿ ರೌಡಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುತ್ತಾನೆ. ಈತನ ಚಟುವಟಿಕೆಗಳನ್ನ ನಿಗಾವಹಿಸುವಲ್ಲಿ ಪೊಲೀಸರು ವಿಫಲ ಆಗಿದ್ದಾರೆ.
ಹಿಂದಿನ ದ್ವೇಷದ ಹಿನ್ನಲೆಯಲ್ಲಿ ಕಳೆದ ವಾರ ಪಾರ್ಕ್ನಿಂದ ಬಾಲಕನ ಅಪಹರಣ ಮಾಡಿ, ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಿರುತ್ತಾರೆ. ಈ ಪ್ರಕರಣದಲ್ಲಿ ಎಂಟು ಜನ ಆರೋಪಿಗಳಲ್ಲಿ ಏಳು ಜನರನ್ನ ಬಂಧಿಸಿದ್ದೇವೆ. ಎಸ್ಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನ ಮಾಡಲಾಗಿತ್ತು. ಹೊರ ರಾಜ್ಯದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದು ಗುಂಡನ್ನ ಹಾರಿಸಲಾಗಿದೆ. ಇವರಿಗೆ ಸಹಾಯ ಮಾಡಿದವರನ್ನ ಸಹ ತನಿಖೆ ನಡೆಸಿ ಬಂಧಿಸುತ್ತೇವೆ. ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪೀನ ಮೇಲೆ, ಕಾನೂನು ತಜ್ಞರ ಮಾಹಿತಿ ಪಡೆಯಲಾಗಿದೆ. ಅಪ್ರಾಪ್ತನ ಮನಸ್ಥಿತಿಯನ್ನ ಆಧರಿಸಿ ವಯಸ್ಕರೆಂದು ತಿಳಿಯಬಹುದು. ವಯಸ್ಕರೂ ಎಂದು ತಿಳಿದು ನಿಯಮಿತ ನ್ಯಾಯಾಲಯದಲ್ಲಿ ವಿಚಾರಣೆ ಮಾಡಬಹುದು. ಹೀಗಾಗಿ ಕಠಿಣ ಶಿಕ್ಷೆಯ ಕ್ರಮವನ್ನ ತೆಗೆದುಕೊಳ್ಳಲಾಗುವುದು ಎಂದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಬಳಿ ಮೊಬೈಲ್, ಗುಟ್ಕಾ ಪತ್ತೆಯಾದ ಮಕ್ಕಳ ಪೋಷಕರನ್ನು ಕರೆಸಿ ವಿಷಯ ತಿಳಿಸಲಾಗಿದೆ. ರೌಡಿ ಚುಟುವಟಿಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ನ ಅಪ್ರಾಪ್ತ ಬಾಲಕರೇ ಕೊಲೆ ಮಾಡಿದ್ದಾರೆ.ಈ ಪ್ರಕರಣದಲ್ಲಿ ಇಬ್ಬರು ಮಾತ್ರ ವಯಸ್ಕರು. ಮಕ್ಕಳಲ್ಲಿ ಇಂತಹ ಕ್ರೌರ್ಯ ಏಕೆ ಮನೆ ಮಾಡಿದೆ ಗೊತ್ತಿಲ್ಲ. ಇನ್ಮುಂದೆ ಶೈಕ್ಷಣಿಕವಾಗಿ ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತೇವೆ. ಈ ಪ್ರಕರಣದಲ್ಲಿ 8 ಆರೋಪಿಗಳ ಪೈಕಿ 7 ಮಂದಿಯನ್ನು ಬಂದಿಸಿದ್ದೇವೆ. ಹೊರ ರಾಜ್ಯದಲ್ಲಿ 3 ಆರೋಪಿಗಳು ಸುತ್ತಾಡಿದ್ದಾರೆ. ಅವರಿದ್ದ ಗೌಪ್ಯ ಸ್ಥಳದಿಂದ ಕರೆ ತರುವ ವೇಳೆ ,ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಇಬ್ಬರ ಕಾಲಿಗೆ ಗುಂಡು ಹೊಡೆದು ಬಂದಿಸಲಾಗಿದೆ. ಇವರಿಗೆ ಯಾರು ದುಡ್ಡು ಕೊಟ್ಟು ಆಶ್ರಯ ನೀಡಿದ್ದು ತನಿಖೆ ನಡೆಸಿ ಅವರನ್ನೂ ಬಂಧಿಸುತ್ತೇವೆ. ಪೋಷಕರಾಗಿದ್ದರೂ ಸಹ ಅವರನ್ನೂ ಸಹ ಬಂದಿಸುತ್ತೇವೆ. ಹಣಕಾಸಿನ ನೆರವು ನೀಡು ಓಡಿಹೋಗಲು ಸಹಕಾರ ನೀಡಿದವರನ್ನೂ ಸಹ ಬಂದಿಸುತ್ತೇವೆ. ಮೃತ ಬಾಲಕ ಹುಡಗಿಗೆ ಮೆಸೇಜ್ ಹಾಗೂ ಸೇರಿದಂತೆ ಹಲವು ವೈಮನಸ್ಸು ಇತ್ತು ಎನ್ನಲಾಗಿದೆ.