ವಿಜಯಪುರ:- ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದ ಹಿನ್ನೆಲೆ ಮದ್ಯಪ್ರಿಯರಲ್ಲಿ ಬಿಯರ್ ಬೇಡಿಕೆ ಹೆಚ್ಚಾಗಿದೆ.
ಒಂದೇ ತಿಂಗಳಲ್ಲಿ ಬಿಯರ್ ಮಾರಾಟದಲ್ಲಿ ದುಪ್ಪಟ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ 25 ಸಾವಿರ ಬಿಯರ್ ಕೆಸ್ ಮಾರಾಟವಾಗಿದ್ರೆ ಈ ವರ್ಷ ಮೇ 17 ರ ವರೆಗೆ 48, ಸಾವಿರ ಬಿಯರ್ ಕೆಸ್ ಮಾರಾಟವಾಗಿದೆ.
ಬಿಸಿಲಿನ ತಾಪಕ್ಕೆ ಮದ್ಯ ಪ್ರೀಯರಲ್ಲಿ ಬಿಯರ್ ಬೇಡಿಕೆ ಹೆಚ್ಚಾಗಿದೆ. ಮೇ ತಿಂಗಳು ಅರ್ಧ ತಿಂಗಳಲ್ಲೇ ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿದೆ.
ಕಳೆದ ಮೇ ತಿಂಗಳಿಗಿಂತ ಈ ವರ್ಷ ಮೇ ಮುಗಿಯುವ ಮುನ್ನವೇ ಬಿಯರ್ ಮಾರಾಟದಲ್ಲಿ ಭಾರಿ ಹೆಚ್ಚಳವಾಗಿದೆ. ಬಿಯರ್ ಹೆಚ್ಚಳದ ಕುರಿತು ವಿಜಯಪುರ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ. ಶಿವಲಿಂಗಪ್ಪ ಬನಹಟ್ಟಿ ಉಪ ಆಯುಕ್ತರು ಅಬಕಾರಿ ವಿಜಯಪುರ ಇವರಿಂದ ಮಾಹಿತಿ ನೀಡಿದ್ದಾರೆ.