ಬೆಂಗಳೂರು:- ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಮುಖ್ಯಸ್ಥರ ನೇಮಕ ಅಧಿಕಾರ ಸಚಿವ ಪರಮೇಶ್ವರ್ ಹೆಗಲಿಗೆ ಕೊಡಲಾಗಿದೆ.
ವೀಕೆಂಡ್ ಮುಗಿಸಿ ಬೆಂಗಳೂರಿನತ್ತ ಮುಖಮಾಡಿದ ಸಿಟಿಮಂದಿ: ಫುಲ್ ಟ್ರಾಫಿಕ್ ಜಾಮ್!
ಹಿರಿಯ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ.
ಸಭೆಯಲ್ಲಿ ರೇಷನ್ ಕಾರ್ಡ್ ಗೊಂದಲ ನಿವಾರಣೆ ಮಾಡುವಂತೆ ಸಚಿವ ಮುನಿಯಪ್ಪಗೆ ಸಿಎಂ ಸೂಚನೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ವಿಪಕ್ಷಗಳು ವಿವಾದ ಮಾಡುತ್ತಿವೆ. ಇದಕ್ಕೆ ಅಂಕಿಅಂಶಗಳ ಸಮೇತ ಉತ್ತರ ಕೊಡಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಕೋವಿಡ್ ಅಕ್ರಮ ಎಸ್ಐಟಿ ರಚನೆ ಬಗ್ಗೆ ಯಾರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು ಎಂಬುದು ಸಭೆಯಲ್ಲಿ ಚರ್ಚೆಯಾಗಿದೆ. ಎಸ್ಐಟಿ ಮುಖ್ಯಸ್ಥರ ನೇಮಕವನ್ನ ಪರಮೇಶ್ವರ್ಗೆ ಬಿಡಲಾಗಿದೆ. ಕೋವಿಡ್ ಹಗರಣವನ್ನು ದೊಡ್ಡದಾಗಿ ಬಿಂಬಿಸಬೇಕು. ಯಾವುದೇ ಕಾರಣಕ್ಕೂ ಇದನ್ನ ಕೈ ಬಿಡೋದು ಬೇಡ. ಬಿಜೆಪಿ ವಿರುದ್ಧ ಕೋವಿಡ್ ಹಗರಣದ ವಿರುದ್ಧ ಮತ್ತಷ್ಟು ತೀವ್ರವಾಗಿ ಮಾತನಾಡಲು ಸಿಎಂ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಿದ್ದಾರೆ.