ಮಂಡ್ಯ: ರಾಜ್ಯ ಸರ್ಕಾರದ ಬಹುನಿರೀಕ್ಷಿತಯ ಕೆಆರ್ಎಸ್ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ನಿರ್ಮಾಣ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಂತಿದೆ. ಹೌದು, ಕೆಆರ್ಎಸ್ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಸ್ಥಾಪಿಸುವ ಯೋಜನೆಗೆ ಎರಡು ಬಾರಿ ಟೆಂಡರ್ ಕರೆದರು ಟೆಂಡರ್ದಾರರು ಭಾಗವಹಿಸಿಲ್ಲ. ಹೀಗಾಗಿ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಜ.31 ರಿಂದ ಫೆ.2 ರವರೆಗೆ 13 ನೇ ಒಣ ಮೆಣಸಿನಕಾಯಿ ಮೇಳ ಆಯೋಜನೆ -ಬಿ.ಆರ್. ಗಿರೀಶ್
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬೃಂದಾವನವನ್ನ ವಿಶ್ವದರ್ಜೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಉನ್ನತೀಕರಿಸಲು ಸರ್ಕಾರ ನಿರ್ಧರಿಸಿದ್ದು, ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ 198 ಎಕರೆ ಪ್ರದೇಶದಲ್ಲಿ 2,663 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿತ್ತು. ಕಳೆದ 2024ರ ಸೆಪ್ಟೆಂಬರ್ 12ರಿಂದ ನವಂಬರ್ 11 ರವರೆಗೆ ಮೊದಲ ಟೆಂಡರ್ ಕರೆಯಲಾಗಿತ್ತು. ಆ ಬಳಿಕ 2024ರ ಡಿಸೆಂಬರ್ 2 ರಿಂದ 2025ರ ಜನವರಿ 16ರವರೆಗೆ ಎರಡನೇ ಬಾರಿ ಟೆಂಡರ್ ಕರೆಯಲಾಗಿತ್ತು. ಆದ್ರೆ ಯಾವುದೇ ಬಿಡ್ಗಳು ಸ್ವೀಕೃತವಾಗದೆ ಮತ್ತೆ ಟೆಂಡರ್ ಅವಧಿ ಜನವರಿ 23ರ ವರೆಗೆ ವಿಸ್ತರಣೆಯಾಗಿದೆ.