ಬೆಂಗಳೂರು: ಕಳ್ಳತನದ ಕೇಸಲ್ಲಿ ತಲೆಮರೆಸಿಕೊಂಡಿದ್ದ ಹಾಸನದ ದೇವೇಗೌಡ 26 ವರ್ಷಗಳ ಬಳಿಕ ಕೊನೆಗೂ ಅಂದರ್ ಆಗಿದ್ದಾನೆ. 1997 ರಲ್ಲಿ ಈತನ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಮೂಲತಃ ಹಾಸನದ ಆಲೂರಿನವನಾದ ದೇವೇಗೌಡ ಆರೋಪಿಯಾಗಿದ್ದು, ದೇವೇಗೌಡನನ್ನು ಕೋರ್ಟ್ ಗೆ ಹಾಜರುಪಡಿಸಿ ಅಂತಾ ಅನೇಕ ಬಾರಿ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದರು.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಆದ್ದರಿಂದ ಹಾಸನ, ಬೆಂಗಳೂರಿನಲ್ಲಿ ದೇವೇಗೌಡನಿಗಾಗಿ ಪೊಲೀಸರು ತಲಾಶ್ ನಡೆಸಿದ್ದರು. ಆದರೆ ವಾರೆಂಟ್ ಜಾರಿಯಾದ ಕೋರ್ಟ್ ಆವರಣದಲ್ಲೇ ಆರೋಪಿ ಕೆಲಸ ಮಾಡುತ್ತಿದ್ದ. ಕೊನೆಗೆ ಸೆಷನ್ ಕೋರ್ಟ್ ಆವರಣದಲ್ಲೇ ಲಾಕ್ ಆಗಿದ್ದಾನೆ. 26 ವರ್ಷಗಳಿಂದ ಕಳ್ಳತನ ಕೇಸಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಸದ್ಯ ಈತನನ್ನು ಬಂಧಿಸಿ ಕೋರ್ಟ್ ಗೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಜರುಪಡಿಸಿದ್ದಾರೆ.