ಮುಂಬೈ:- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ಪದೇ ಪದೇ ಹೆಸರು ಬದಲಿಸುತ್ತಿದ್ದಾನೆ. ಪೊಲೀಸರು ಆರೋಪಿ ಅಕ್ರಮ ಬಾಂಗ್ಲಾದೇಶಿಯಾಗಿರಬಹುದು ಎಂದು ಶಂಕಿಸಿದ್ದಾರೆ.
ಚಾಂಪಿಯನ್ ಟ್ರೋಫಿಯಲ್ಲಿ ಸಿರಾಜ್ ಕೈ ಬಿಟ್ಟಿದ್ಯಾಕೆ!? ಅಚ್ಚರಿ ಮೂಡಿಸಿದ ಕ್ಯಾಪ್ಟನ್ ರೋಹಿತ್ ಹೇಳಿಕೆ!
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸೈಫ್ ನಿವಾಸದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಾಸರ್ವಾಡವಲಿಯ ಹಿರಾನಂದಾನಿ ಎಸ್ಟೇಟ್ ಬಳಿ ಬಂಧಿಸಲಾಗಿದೆ. ದುಷ್ಕರ್ಮಿ ಥಾಣೆಯ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಬಂಧನ ಬಳಿಕ ಆರೋಪಿಯ ವಿಚಾರಣೆ ವೇಳೆ ಮುಂಬೈ ಪೊಲೀಸರು ಶಾಕ್ ಆಗಿದ್ದಾರೆ. ಏಕೆಂದರೆ ವಿಚಾರಣೆ ವೇಳೆ ಆರೋಪಿ ತನ್ನ ನಿಜವಾದ ಚಹರೆಯನ್ನು ಬಹಿರಂಗಪಡಿಸುತ್ತಿಲ್ಲ. ಯಾರು ಎಲ್ಲಿಯವನು? ಏಕೆ ದಾಳಿ ಮಾಡಿದ್ದು..? ತನ್ನ ಹೆಸರನ್ನು ಸೇರಿ ಇದ್ಯಾವುದನ್ನೂ ಬಹಿರಂಗಪಡಿಸದೇ ಪದೇ ಪದೇ ಹೆಸರು ಬದಲಿಸಿ ಪೊಲೀಸರ ದಿಕ್ಕು ತಪ್ಪಿಸುತ್ತಿದ್ದಾರೆ ಖತರ್ನಾಕ್ ಖದೀಮರು. ಮೂಲಗಳ ಪ್ರಕಾರ, ಆರೋಪಿಯು ಅಕ್ರಮ ಬಾಂಗ್ಲಾದೇಶಿಯೂ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.