ಬಾಗಲಕೋಟೆ: ಕೃಷ್ಣ ನದಿಗೆ ಅಡ್ಡಲಾಗಿ ಹಿಪ್ಪರಗಿ ಬ್ಯಾರೇಜ್ ನಿರ್ಮಾಣವಾಗಿದ್ದು ಒಟ್ಟು 22 ಗೇಟ್ಗಳ ಪೈಕಿ 21 ಗೇಟ್ಗಳು ಪೂರ್ಣವಾಗಿ ಬಂದ್ ಆಗಿದೆ. ಆದರೆ ಏಳನೇ ಗೇಟ್ ಪೂರ್ಣವಾಗಿ ಲಾಕ್ ಆಗದ ಕಾರಣ ಮೂರು ಅಡಿ ಕೆಳಮಟ್ಟದಿಂದ ನೀರು ಹರಿಯುತ್ತಿದೆ. 7ನೇ ಗೇಟ್ ಪೂರ್ಣ ಕೆಳಗಿಳಿಯದೇ ಮೂರಡಿ ಅಂತರದಲ್ಲೇ ನಿಂತಿದೆ.
ಗೇಟ್ ಕೆಳಗಡೆ ಯಾವುದೋ ವಸ್ತು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗ ದುರಸ್ತಿ ಕಾರ್ಯದಲ್ಲಿ ಬ್ಯಾರೇಜ್ ಸಿಬ್ಬಂದಿ ತೊಡಗಿದ್ದಾರೆ. ಬೇಸಿಗೆ ಕಾಲದಲ್ಲಿ ಜಮಖಂಡಿ ನಗರ ಹಾಗೂ ಹಳ್ಳಿಗೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಆದಷ್ಟು ಬೇಗ ದುರಸ್ತಿ ಮಾಡಿ ನೀರು ಉಳಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.