ಬೆಂಗಳೂರು: ಯಾವುದೇ ಕಾರಣಕ್ಕೂ 6 ವರ್ಷದ ನಿಯಮ ಸಡಿಲಿಕೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 6 ವರ್ಷದ ನಿಯಮ ಸಡಿಲಿಕೆ ಸಾಧ್ಯವಿಲ್ಲ. ನಾನೇನು ಮಾಡಲು ಆಗೊಲ್ಲ. ಅನೇಕರು ಈ ಸಂಬಂಧ ಕೋರ್ಟ್ ಗೆ ಹೋಗಿದ್ರು. ಕೋರ್ಟ್ ಕೂಡಾ ಅವರ ಅರ್ಜಿ ವಜಾ ಮಾಡಿದೆ. ಕೋರ್ಟ್ ನಲ್ಲಿ ಏನೇ ಆದೇಶ ಬಂದರೂ ನಾವು ಪಾಲನೆ ಮಾಡ್ತೀವಿ ಎಂದು ಹೇಳಿದರು.
ಬೀಟ್ ರೂಟ್ ಸೇವಿಸುವುದರಿಂದ ನೀವು ದಪ್ಪ, ಉದ್ದ ಕೂದಲನ್ನು ಪಡೆಯಬಹುದು..!
6 ವರ್ಷದ ನಿಯಮದಿಂದ ಬೇಜಾರ್ ಆಗುತ್ತದೆ. ಆದರೆ ನಿಯಮದ ಪ್ರಕಾರ ನಾವು ನಡೆಯಬೇಕು. 1 ತಿಂಗಳು, 2 ತಿಂಗಳು ಕಡಿಮೆ ಇರೋರಿಗೆ ಕೊಟ್ಟರೆ ಮತ್ತೊಬ್ಬರು ಕೇಳ್ತಾರೆ. ಇದೆಲ್ಲವೂ ಬಹಳ ಚರ್ಚೆ ಆಗೋ ವಿಷಯ. ಎಷ್ಟೋ ಪೋಷಕರು 7 ದಿನ ಕಡಿಮೆ ಅಂತಿದ್ದಾರೆ.
ಆದರೆ ಅದು ಕಾನೂನಿನಲ್ಲಿ ಇಲ್ಲ. ನಾವು ಅದನ್ನು ಪರಿಗಣಿಸಲು ಸಾಧ್ಯವಿಲ್ಲ. ಈಗ ಈ ವಿಷಯ ಕೋರ್ಟ್ ನಲ್ಲಿ ಇದೆ. ಕೋರ್ಟ್ ನಲ್ಲಿ ನಿರ್ಧಾರ ಬಂದರೆ ನಾವು ತೀರ್ಮಾನ ಮಾಡಬಹುದು. ಕೋರ್ಟ್ ತೀರ್ಮಾನದಂತೆ ನಾವು ನಡೆದುಕೊಳ್ತೀವಿ ಎಂದು ಹೇಳಿದರು.