ಲಕ್ನೋ:- 5 ದಿನಗಳ ಹೆಣ್ಣು ಮಗುವೊಂದು ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೈನ್ಪುರಿಯ ಆಸ್ಪತ್ರೆಯೊಂದರ ವೈದ್ಯರ ಸಲಹೆಯಂತೆ ನವಜಾತ ಶಿಶುವನ್ನು ತುಂಬಾ ಹೊತ್ತು ಸೂರ್ಯನ ಬಿಸಿಲು ತಾಕುವಂತೆ ತೆರೆದ ಸ್ಥಳದಲ್ಲಿ ಇರಿಸಲಾಗಿತ್ತು. ಇದರಿಂದ ಮಗು ಮೃತಪಟ್ಟಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ತಲೆ ಮರೆಸಿಕೊಂಡಿದ್ದಾರೆ
IPL 2024: RCB ಪ್ಲೇ ಆಫ್ ಗೆ ಹೋಗೋದು ಗ್ಯಾರಂಟಿ..! ಫ್ಯಾನ್ಸ್ ಓದಲೇಬೇಕಾದ ನ್ಯೂಸ್!
ಭುಗೈ ಎಂಬ ಹಳ್ಳಿಯ ರಿತಾ ಎನ್ನುವ ಮಹಿಳೆ ಇತ್ತೀಚೆಗೆ ಮೈನ್ಪುರಿಯ ರಾಧಾರಮಣ್ ರಸ್ತೆಯಲ್ಲಿರುವ ಸಾಯಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಿಸೇರಿಯನ್ ಮೂಲಕ ಈ ಮಗು ಜನಿಸಿತ್ತು. ಜನಿಸುವಾಗಲೇ ಮಗುವಿಗೆ ಕೆಲ ಆರೋಗ್ಯ ಸಮಸ್ಯೆಗಳಿದ್ದವು. ಇದಕ್ಕೆ ವೈದ್ಯರು ಪ್ರತಿ ದಿನ ಅರ್ಧ ಗಂಟೆ ಮಗುವನ್ನು ಬಿಸಿಲಿನಲ್ಲಿ ಇರಿಸುವಂತೆ ಮನೆಯವರಿಗೆ ಸಲಹೆ ನೀಡಿದ್ದರು.
ವೈದ್ಯರ ಸಲಹೆಯಂತೆ ಮಗುವಿನ ಮನೆಯವರು 5 ದಿನಗಳ ಹಸುಳೆಯನ್ನು ಆಸ್ಪತ್ರೆಯ ಟೆರೇಸ್ಗೆ ಒಯ್ದು ಬಿಸಿಲಿನಲ್ಲಿ ಮಲಗಿಸಿದ್ದರು. ಬೆಳಗ್ಗೆ ಸುಮಾರು 11.30ಕ್ಕೆ ಟೆರೇಸ್ನಲ್ಲಿ ಇರಿಸಿ ಅರ್ಧ ಗಂಟೆ ಆದ ಮೇಲೆ ಮಗುವನ್ನು ವಾರ್ಡ್ಗೆ ಕರೆದೊಯ್ದಿದ್ದರು. ಇದಾಗಿ ಕೆಲ ಹೊತ್ತಿನಲ್ಲೇ ಮಗು ಮೃತಪಟ್ಟಿತ್ತು
ಹೇಳಿ ಕೇಳಿ ಇದು ಬಿರು ಬೇಸಗೆ ಕಾಲ. ಇತ್ತೀಚೆಗಂತೂ ಉಷ್ಣಾಂಶ ವಿಪರೀತ ಎನ್ನುವಷ್ಟು ಏರಿಕೆಯಾಗಿದೆ. ಹೀಗಾಗಿ ಅತಿಯಾದ ತಾಪಮಾನ ತಾಳಲಾರದೆ ಮಗು ಅಸುನೀಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಉಷ್ಣಾಂಶ 42 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ವಯಸ್ಕರಿಗೇ ಈ ಬಿಸಿಲಿನ ಝಳವನ್ನು ತಾಳಲು ಸಾಧ್ಯವಾಗುತ್ತಿಲ್ಲ. ಇನ್ನು 5 ದಿನಗಳ ಹಸುಳೆ ಹೇಗೆ ತಡೆದುಕೊಳ್ಳುತ್ತದೆ ಎಂದು ಮನೆಯವರು ಪ್ರಶ್ನಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ತಮ್ಮ ಮಗುವಿನ ಸಾವಿಗೆ ನೇರ ಹೊಣೆ ಎಂದು ಆರೋಪಿಸಿದ್ದಾರೆ