ಮೈಸೂರು:- ಥೈಲ್ಯಾಂಡ್ ಬ್ಯೂಟಿ ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ: ಡಿಸಿಗೆ ಮಹತ್ವದ ಅಧಿಕಾರ ಕೊಟ್ಟ ಗೃಹ ಸಚಿವ!
ಸರ್ಕಾರಿ ಕೆಲಸ ಬಿಟ್ಟು ಥೈಲ್ಯಾಂಡ್ನಿಂದ ಯುವತಿಯನ್ನು ಕರೆತಂದು ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿನ ಹೋಟೆಲ್ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದವನನ್ನು ಇಲ್ಲಿನ ಸರಸ್ವತಿಪುರಂ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದೆ.
ಆರೋಪಿ ರತನ್ ಕೆಎಸ್ಆರ್ಟಿಸಿ ನೌಕರಿ ಬಿಟ್ಟು ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು. ವೈಶ್ಯಾವಾಟಿಕೆಗಾಗಿ ಥೈಲ್ಯಾಂಡ್ನಿಂದ ಯುವತಿಯನ್ನು ಕರೆಸಿದ್ದನು. ರತನ್ ನಡೆಸುತ್ತಿದ್ದ ವೇಶ್ಯಾವಾಟಿಕೆಗೆ ರೇವಣ್ಣ ಎಂಬಾತ ಸಾಥ್ ನೀಡಿದ್ದನು. ಆರೋಪಿ ರತನ್ ಪ್ರತಿ ಗಿರಾಕಿಯಿಂದ 8-10 ಸಾವಿರ ರೂ. ವಸೂಲಿ ಮಾಡುತ್ತಿದ್ದನು. ಈ ಮಾಹಿತಿ ತಿಳಿದ ಸರಸ್ವತಿಪುರಂ ಠಾಣೆ ಪೊಲೀಸರು, ಶನಿವಾರ ಹೊಟೇಲ್ ಮೇಲೆ ದಾಳಿ ಮಾಡಿ, ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಆರೋಪಿ ರತನ್ ಸೇರಿದಂತೆ ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.