ಮುಂಬೈ: ಏಕನಾಥ್ ಶಿಂಧೆ (Eknath Shinde) ಬಣ ನಿಜವಾದ ಶಿವಸೇನೆ. ಏಕನಾಥ್ ಶಿಂಧೆ ನಾಯಕತ್ವ ಸಾಂವಿಧಾನಿಕವಾಗಿದೆ ಎಂದು ಮಹಾರಾಷ್ಟ್ರ (Maharashtra) ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narwekar) ತಿಳಿಸಿದ್ದಾರೆ. ಶಿವಸೇನೆ ಅನರ್ಹತೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಆದೇಶ ಪ್ರಕಟಿಸಿದ್ದಾರೆ. ಉದ್ಧವ್ ಠಾಕ್ರೆಗೆ ಏಕನಾಥ್ ಶಿಂಧೆಯನ್ನು ಅನರ್ಹ ಮಾಡುವ ಅಧಿಕಾರ ಇಲ್ಲ.
South Korea: ನಾಯಿ ಮಾಂಸ ಸೇವನೆಗೆ ರದ್ದು : ದಕ್ಷಿಣ ಕೊರಿಯಾ ಸಂಸತ್ತಿನಲ್ಲಿ ಮಸೂದೆ ಅಂಗೀಕಾರ!
ಉದ್ಧವ್ ಠಾಕ್ರೆ ನಾಯಕತ್ವ ಅವರ ಪಕ್ಷದ ಇಚ್ಛೆಯಂತೆ ಇಲ್ಲ. ಹೀಗಾಗಿ ಅವರ ಆದೇಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 1999 ಶಿವಸೇನೆ ಪಕ್ಷದ ಸಂವಿಧಾನವೇ ಅಧಿಕೃತ. ಉದ್ಧವ್ ಠಾಕ್ರೆಗೆ ಶಾಸಕರ ಬೆಂಬಲ ಇಲ್ಲ. 2018 ರ ಪಕ್ಷದ ಹೊಸ ಸಂವಿಧಾನ ಚುನಾವಣಾ ಆಯೋಗದಲ್ಲಿಲ್ಲ. ಹೀಗಾಗಿ ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ 1999 ಸಂವಿಧಾನ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.