ಬೆಂಗಳೂರು: ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್ಮನ್ ಋತುರಾಜ್ ಗಾಯಕ್ವಾಡ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಹೊರ ಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಋತುರಾಜ್ ಗಾಯಕ್ವಾಡ್ ಅವರು ತಮ್ಮ ಬಲಗೈ ಬೆರಳಿಗೆ ಚೆಂಡನ್ನು ತಗುಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ವಾಡ್ ಅವರ ಬದಲು ರಜತ್ ಪಾಟಿದಾರ್ ಅವರು ಇನಿಂಗ್ಸ್ ಆರಂಭಿಸಿದ್ದರು. ಅಂದ ಹಾಗೆ ಋತುರಾಜ್ ಗಾಯಕ್ವಾಡ್ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಗಾಯಕ್ವಾಡ್ ಅವರ ಬದಲು ಅಭಿಮನ್ಯು ಈಶ್ವರನ್ ಅವರು ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಗಾಯಕ್ವಾಡ್ ಅವರು ಕೆಲವೇ ದಿನಗಳ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಬಿಸಿಸಿಐ ಪುರುಷರ ಆಯ್ಕೆ ಸಮಿತಿಯು ಋತುರಾಜ್ ಗಾಯಕ್ವಾಡ್ ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.