ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಅಂದರೆ ಬುಧವಾರ, ಅಕ್ಟೋಬರ್ 16 ರಿಂದ ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ. ನಿಗದಿಯಂತೆ ಇಂದು ಮುಂಜಾನೆ 9 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಸಹ ನಡೆಯಲು ಸಾಧ್ಯವಾಗಲಿಲ್ಲ.
ವಿರಾಟ್ ರಾತ್ರಿ ಅದನ್ನು ಮಾಡ್ತಾರೆ, ಇದು ಇಷ್ಟವಾಗಲ್ಲ: ಬೆಡ್ ರೂಂ ರಹಸ್ಯ ಬಿಚ್ಚಿಟ್ಟ ಅನುಷ್ಕಾ ಶರ್ಮಾ!
ನಿನ್ನೆಗ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ತುಂತುರು ಮಳೆ ಬೀಳುತ್ತಲೇ ಇದೆ. ಮಳೆ ಕೊಂಚ ಕಡಿಮೆಯಾದಾಗಲೆಲ್ಲ ಅಂಪೈರ್ಗಳು ಮೈದಾನವನ್ನು ಪರಿಶೀಲಿಸಿದರು. ಆದರೆ ಪಂದ್ಯಕ್ಕೆ ಮೈದಾನ ಸಜ್ಜಾಗಿಲ್ಲದ್ದನ್ನು ಮನಗಂಡ ಅಂಪೈರ್ಸ್ ಕಾದು ನೋಡುವ ತಂತ್ರಕ್ಕೆ ಮುಂದಾದರು. ಹೀಗಾಗಿ ಮೊದಲ ದಿನದಾಟದ ಮೊದಲೆರಡು ಸೆಷನ್ಗಳವರೆಗೂ ಪಂದ್ಯವನ್ನು ನಡೆಸಲು ಕಾಯಲಾಯಿತು. ಆದರೂ ಮಳೆ ನಿಲ್ಲದನ್ನು ಗಮನಿಸಿದ ಅಂಪೈರ್ಸ್, ದಿನದಾಟವನ್ನು ರದ್ದುಗೊಳಿಸಲು ಮುಂದಾದರು.
ಹವಾಮಾನ ವರದಿಯ ಪ್ರಕಾರ, ಭಾರತ- ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂಬುದು ಖಚಿತವಾಗಿತ್ತು. ಅದರಂತೆ ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಕೂಡ ನಡೆಯದೆ ರದ್ದಾಗಿದೆ. ಹೀಗಾಗಿ ನಾಳೆಯಾದರೂ ಪಂದ್ಯ ಆರಂಭವಾಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಆದರೆ ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 20ರವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ.