ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ ಭೀಕರ ಚಳಿ ಇರಲಿದ್ದು, ಕಳೆದ 10 ವರ್ಷದಲ್ಲೇ ಭಯಂಕರ ವಾತಾವರಣ ಇರಲಿದೆ.
Hubballi: ಶಕ್ತಿ ಯೋಜನೆ ಕೈಬಿಟ್ಟು ಸಹಾಯ ಮಾಡಿ: ಆಟೊ ರಿಕ್ಷಾ ಚಾಲಕರ ಒಕ್ಕೂಟ ಒತ್ತಾಯ!
ಡಿ. 17ರಂದು ರಾತ್ರಿ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಯಲಿದೆ. ನಿಜಕ್ಕೂ ಈ ಮಟ್ಟಕ್ಕೆ ಇಳಿದರೆ, ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ಇದಾಗಲಿದೆ ಎಂದು ಹೇಳಿದೆ. 2011ರ ಡಿ. 24ರ ರಾತ್ರಿ ಇದೇ ರೀತಿ ತಾಪಮಾನ ತೀರಾ ಕೆಳಮಟ್ಟಕ್ಕೆ ಇಳಿದಿತ್ತು. ಅಂದು, 12.8 ಡಿಗ್ರಿ ಸೆಲ್ಸಿಯಸ್ ಗೆ ತಾಪಮಾನ ಇಳಿಕೆಯಾಗಿತ್ತು. ಅದಾಗಿ 14 ವರ್ಷಗಳ ನಂತರ ಮತ್ತೆ ಅಂಥದ್ದೇ ಪರಿಸ್ಥಿತಿ ಬೆಂಗಳೂರಿಗೆ ಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಚಳಿ ಇದ್ದೇ ಇರುತ್ತದೆ. ರಾತ್ರಿ ವೇಳೆ ಸರಾಸರಿ ಉಷ್ಣಾಂಶ 15.7 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದರೆ, ಈ ವರ್ಷ ಚಳಿ ಸ್ವಲ್ಪ ಜಾಸ್ತಿಯೇ ಇದೆ. ಭಾನುವಾರದಂದು ರಾತ್ರಿ ತಾಪಮಾನ 15.5 ಡಿಗ್ರಿ ಸೆಲ್ಸಿಯಸ್ ನಷ್ಟಿತ್ತು. ಎಚ್ ಎಎಲ್ ನಲ್ಲಿ ಉಷ್ಣಾಂಶ ಮತ್ತಷ್ಟು ಕುಸಿದಿತ್ತು. ಅಲ್ಲಿ ಉಷ್ಣಾಂಶವು 14.7 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು. ಬೆಂಗಳೂರು ಇಂಟರ್ ನ್ಯಾ,ಷನಲ್ ಏರ್ ಪೋರ್ಟ್ ಬಳಿ 14.5 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು.
ಡಿ. 17ರ ರಾತ್ರಿ ಅತೀವ ಚಳಿಯಿರುವುದು ಮಾತ್ರವಲ್ಲ, ಡಿಸೆಂಬರ್ ತಿಂಗಳು ಪೂರ್ತಿಯಾಗಿ ಪ್ರತಿ ರಾತ್ರಿಯೂ ಚಳಿಯಿರಲಿದೆ ಎಂದು ಐಎಂಡಿ ತಜ್ಞರು ತಿಳಿಸಿದ್ದಾರೆ. ಪ್ರತಿ ದಿನ ರಾತ್ರಿ ಆವರಿಸುವ ಈ ಚಳಿ, ಮರುದಿನ ಮುಂಜಾನೆಯವರೆಗೂ ಮುಂದುವರಿಯಲಿದೆ. ದಿನದ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ನಷ್ಟಿರಲಿದ್ದು, ಅತ್ಯಂತ ಕಡಿಮೆ ಉಷ್ಣಾಂಶವು 16 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆ ಎಂದು ಹೇಳಿದ್ದಾರೆ.