ಮಂಗಳೂರು:- ಭೀಕರ ಅಪಘಾತದಲ್ಲಿ ಕಂದಕಕ್ಕೆ ಕಾರು ಉರುಳಿದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ಸಂಭವಿಸಿದೆ.
ಕೆರೆಯ ಒಡಲು ಸೇರುತ್ತಿದೆ ತ್ಯಾಜ್ಯ ನೀರು: ಇತಿಹಾಸವಿರುವ ಕೆರೆ ಇದೀಗ ಕಲುಷಿತ
ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ಅಣ್ಣು ನಾಯ್ಕ್, ಚಿದಾನಂದ, ರಮೇಶ್ ನಾಯ್ಕ್ ಮೃತ ದುರ್ದೈವಿ ಗಳು. ಕಾರು ಸುಳ್ಯದಿಂದ ಪುತ್ತೂರಿನ ಪುಣಚಕ್ಕೆ ಆಗಮಿಸುತ್ತಿತ್ತು. ನಸುಕಿನ ಜಾವ 4:15ರ ಸುಮಾರಿಗೆ ನಿದ್ದೆ ಮಂಪರಿನಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಬಿದ್ದಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.