ಬೆಂಗಳೂರು:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಜಿಗಣಿ ಲಿಂಕ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
Shivakumar: ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ: DCM ಡಿಕೆಶಿ!
ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿ ಒಬ್ಬ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. 20 ವರ್ಷದ ಶಶಾಂಕ್ ಮೃತ ಸವಾರ. 22 ವರ್ಷದ ರಿನಿತ್ ಎಂಬ ವ್ಯಕ್ತಿಗೆ ಕಾಲು ಕಟ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನ ಹೊಂಗಸಂದ್ರ ನಿವಾಸಿಯಾಗಿರುವ ರಿನಿತ್ ನಿನ್ನೆ ಕೆಲಸ ಮುಗಿಸಿ ವಾಪಸ್ ಆಗುತ್ತಿದ್ದಾಗ ಎಂಟಿಆರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಾಂಕ್ ಬೈಕ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದಾರೆ. ಇದರಿಂದ ಶಶಾಂಕ್ ಸ್ಥಳದಲ್ಲೇ ಸಾವನ್ನಪ್ಪಿದ್ದು ರಿನಿತ್ಗೆ ಕಾಲು ಕಟ್ ಆಗಿದೆ.