ಭೋಪಾಲ್: ಬಸ್ಸೊಂದು ಟ್ರಕ್ʼಗೆ ಡಿಕ್ಕಿಯಾಗಿ (Accident) ಹೊತ್ತಿ ಉರಿದ ಪರಿಣಾಮ 12 ಜನ ಸಾವಿಗೀಡಾದ ಘಟನೆ ಮಧ್ಯಪ್ರದೇಶದ (Madhya Pradesh) ಗುನ ಹಾಗೂ ಅರೋನ್ ನಡುವಿನ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅದರಲ್ಲಿ 5 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ಬಸ್ ಗುನಾದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಅರೋನ್ಗೆ ತೆರಳುತ್ತಿತ್ತು ಈ ವೇಳೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಕ್ಕೊಳಗಾದ ಬಸ್ ಬಿಜೆಪಿ (BJP) ಮುಖಂಡ ಧರ್ಮೇಂದ್ರ ಸಿಕರ್ವಾರ್ ಅವರ ಒಡೆತನದ್ದು ಎಂದು ತಿಳಿದು ಬಂದಿದೆ. ಬಸ್ನ ವಿಮೆ ಪ್ರಮಾಣಪತ್ರಗಳ ಅವಧಿ ಮುಗಿದಿದ್ದು,
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
2021 ರಿಂದ ರಸ್ತೆ ತೆರಿಗೆ ಸಹ ಪಾವತಿಸಿಲ್ಲ. ಬಸ್ನ ಸುರಕ್ಷತಾ ಪ್ರಮಾಣ ಪತ್ರದ ಅವಧಿ ಸಹ ಮುಗಿದಿತ್ತು ಎಂದು ವರದಿಯಾಗಿದೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ನೆರವು ಘೋಷಣೆ ಮಾಡಲಾಗಿದೆ. ಅಪಘಾತಕ್ಕೆ ಕಾರಣ ಹಾಗೂ ಬಸ್ನ ದಾಖಲೆಗಳ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದ್ದಾರೆ.